ಬೆಳ್ತಂಗಡಿ : ಬಚ್ಚಲು ಮನೆಯಲ್ಲಿ ಗೋಮಾಂಸದ ಪ್ಯಾಕೆಟ್‌ಗಳನ್ನು ತಯಾರಿ ಮಾಡಿ ಸುತ್ತಲಿನ ಹಳ್ಳಿಗಳಿಗೆ ಅವ್ಯಾಹತವಾಗಿ ಸರಬರಾಜು ಮಾಡುತ್ತಿದ್ದ ಕಾಶಿಪಟ್ಣದ ಮುಂಗುಲ್‌ದೋಡಿ ನಿವಾಸಿ ಶಬೀರ್ (34) ಎಂಬಾತನನ್ನು ಹಿಂದೂ ಸಂಘಟನೆಗಳು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪಟ್ಣದಲ್ಲಿ ರವಿವಾರ ನಡೆದಿದೆ.
ಆರೋಪಿ ಶಬೀರ್ ಮನೆಯ ಸ್ನಾನದ ಮನೆಯಲ್ಲಿ ಗೋಮಾಂಸ ಸಜ್ಜುಗೊಳಿಸುತ್ತಿದ್ದ. ಮನೆಯವರು ಅಲ್ಲದೇ ಲತೀಫ್, ಮೊದಿನ್ ಹಾಗೂ ಹಮೀದ್ ಎಂಬವರ ಸಹಾಯದಿಂದ ಹಳ್ಳಿಗಳಿಗೆ ಸರಬರಾಜು ಮಾಡುತಿದ್ದ ಎನ್ನಲಾಗಿದೆ.
ಲತೀಫ್‌ನ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಮಾಂಸ ತಯಾರಿಗೆ ಉಪಯೋಗಿಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮನೆಯ ಸಮೀಪ ಹೊಂಡ ತೋಡಿ ಹೂತಿಟ್ಟ ತಲೆಬುರುಡೆಗಳು ಪತ್ತೆಯಾಗಿವೆ. ಕೆಲ ದಿನಗಳ ಹಿಂದೆ ಈ ಮನೆ ಮಾಲಕ ಶಿರ್ತಾಡಿಯಲ್ಲಿ ಗೋಮಾಂಸ ವಿಚಾರದಲ್ಲಿ ಸಿಕ್ಕಿಬಿದ್ದಿದ್ದ.
ಹಿಂದೂ ಸಂಘಟನೆಗಳು ಭೇಟಿ ನೀಡಿದಾಗ ಅಲ್ಲಿದ್ದ ಲತೀಫ್, ಮೊದಿನ್ ಹಾಗೂ ಹಮೀದ್ ಎಂಬವರು ಪರಾರಿಯಾಗಿದ್ದಾರೆ. ಲತೀಫ್‌ನ ಮೇಲೆ ಈ ಮೊದಲೇ ಇತರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.
ವೇಣೂರು ಎಸ್‌ಐ ಅಬ್ದುಲ್ ಖಾದರ್ ಸಹಿತ ಪೊಲೀಸರು ಆಗಮಿಸಿ ಮನೆಯಿಂದ 25 ಕೆಜಿ ಗೋಮಾಂಸ ವಶಪಡಿಸಿಕೊಂಡಿಸಿದ್ದಾರೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.