ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ರಚನೆ

7:57 PM, Monday, November 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ಸ್ಥಾಪನೆಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಒಕ್ಕೂಟವನ್ನು ಸೋಮವಾರ ಸಂಜೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೋಟ ಎಂ.ಎಲ್.ಸಿ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ರಚನೆಪಂಚಾಯತ್ ಗಳಿಗೆ ಹೆಚ್ಚಿನ ಅಧಿಕಾರಕ್ಕಾಗಿ ಹಾಗೂ ಕೆಲವೊಂದು ಸವಲತ್ತುಗಳನ್ನು ಪಡೆಯಲು ಮತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಸಮೂಹಿಕ ತೀರ್ಮಾನಕ್ಕಾಗಿ ಮಂಗಳೂರು ತಾಲೂಕಿನ 49 ಗ್ರಾಂ ಪಂಚಾಯತ್  ಗಳ ಅಧ್ಯಕ್ಷ  ಮತ್ತು ಉಪಾಧ್ಯಕ್ಷರುಗಳ ಒಕ್ಕೂಟವನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.

ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ರಚನೆಉದ್ಘಾಟನೆ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಹಕ್ಕುಗಳನ್ನು ಸರಕಾರದ ಮುಂದೆ ಕೇಳಬೇಕು ಶಾಸಕರು ಗ್ರಾಮ ಪಂಚಾಯತ್ಗಳ ಹಕ್ಕನ್ನು ಕಸಿಯುತ್ತಾರೆ ಅದಕ್ಕೆ ತಾವುಗಳು ಎಚ್ಚೆತ್ತು ಜಾಗ್ರತರಾಗಿರಬೇಕು ಎಂದು ಹೇಳಿದರು.

ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ರಚನೆಒಕ್ಕೂಟ ರಚನೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಮಚಂದ್ರ ಕುಂಪಲ, ಮಂಗಳೂರು ತಾಲೂಕು ಇ. ಓ. ವಿಶ್ವನಾಥ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ ಅಜೀಝ್ ಮಲಾರ್, ಕೃಷ್ಣ ಅಮೀನ್ ಜಿ.ಪಂ. ಸದಸ್ಯ, ಸುರೇಶ್ ಕಂಬಳಿ ಅಧ್ಯಕ್ಷರು, ಶಾಹುಲ್ ಹಮೀದ್ ಬಜ್ಪೆ, ಪ್ರಧಾನ ಕಾರ್ಯದರ್ಶಿ, ರೆಫೆಲ್ ಡಿ ಸೋಜಾ, ಕೋಶಾಧಿಕಾರಿ ಇವರುಗಳು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English