ಮಂಗಳೂರು : ಸಿಪಿಐ(ಎಂ) ಮಂಗಳೂರು ನಗರ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ ರೇಶನ್ ಅವ್ಯವಸ್ಥೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ ನಡೆಯಿತು.
ರೇಶನ್ ಪದ್ಧತಿಯಲ್ಲಿ ಎಪಿಎಲ್-ಬಿಪಿಎಲ್ ಭೇದ ಸಲ್ಲದು, ಎಲ್ಲಾ ಕುಟುಂಬಗಳಿಗೂ ತಿಂಗಳಿಗೆ 1.00. ದರದಲ್ಲಿ 35 ಕೆ.ಜಿ. ಅಕ್ಕಿ ವಿತರಣೆಯಾಗಬೇಕು ಎಂದು ಸಿಪಿಐ(ಎಂ) ಮಂಗಳೂರು ನಗರ ಸಮಿತಿಯ ಬಿ.ಮಾದವ ಹೇಳಿದರು.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರವು ಹೊಸ ರೇಶನ್ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಕಿಲೋಗೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ ಕೊಡುವ ಸಮಯದಲ್ಲಿ ಎಪಿಎಲ್ ಕುಟುಂಬಗಳಿಗೆ ಈ ತನಕ ಸಿಗುತ್ತಿದ್ದ ರಿಯಾಯಿತಿ ದರದ ಅಕ್ಕಿಯ ವಿತರಣೆಯನ್ನು ನಿಲ್ಲಿಸಿದ್ದಾರೆ.
ರೇಶನ್ ಕಾರ್ಡ್ ನೀಡುವ ಪ್ರಕ್ರಿಯೆಯು ಗೊಂದಲಮಯವಾಗಿದ್ದು ದಿನಕ್ಕೊಂದು ಕಾನೂನು ತರುತ್ತಿದ್ದಾರೆ. ಹೆಸರು ತೆಗೆಸಲು, ಹೆಸರು ಸೇರಿಸಲು ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಸಾವಿರಾರು ಬಡವರು ಬಿಪಿಎಲ್ ಕಾರ್ಡ್ ನಿಂದಲೇ ವಂಚಿತರಾಗಿದ್ದಾರೆ. ಸೀಮೆಎಣ್ಣೆ, ಸಕ್ಕರೆ ಇಲ್ಲವೇ ಇಲ್ಲವಾಗಿದೆ.ಆದ್ದರಿಂದ ರೇಶನ್ ಪದ್ಧತಿಯಲ್ಲಿ ಬಿಪಿಎಲ್- ಎಪಿಎಲ್ ಎಂಬ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಟ್ಟು ಎಲ್ಲಾ ಕುಟುಂಬಗಳಿಗೂ ಒಂದೇ ರೀತಿಯ ಕಾರ್ಡ್ ಗಳನ್ನು ವಿತರಿಸಿ 35 ಕಿಲೋ. ಅಕ್ಕಿ, ಬೇಳೆಕಾಳು, ಅಡುಗೆ ಎಣ್ಣೆ, ಸಕ್ಕರೆ ಮುಂತಾದ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕೆಂದು ಎಂದು ಬಿ. ಮಾಧವ ಹೇಳಿದರು.
ಈ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸಲು ದಿನಾಂಕ 02-09-2013ನೇ ಸೋಮವಾರ ಬೆಳಿಗ್ಗೆ ಗಂಟೆ 10.00ಕ್ಕೆ ಮೈದಾನ ರಸ್ತೆಯಲ್ಲಿರುವ ಸಿಪಿಐ(ಎಂ) ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟು ಬಳಿಕ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್ ಬಜಾಲ್, ಪಂಜಿಮೊಗರು ಕಾರ್ಪೋರೇಟರ್ ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ, ಭಾರತಿ ಶೆಟ್ಟಿ , ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English