ಬಡವರಿಗೆ ಸರ್ಕಾರದ ಸಹಾಯಧನ ವಿತರಿಸಿದ ಜೆ.ಆರ್.ಲೋಬೊ

4:33 PM, Thursday, September 5th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

loboಮಂಗಳೂರು: ಬಡಕುಟುಂಬಗಳಿಗೆ ಸರ್ಕಾರದಿಂದ ಸಿಗುವ ವಿವಿಧ ರೀತಿಯ ಸಹಾಯಧನವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ನಗರದ ಎನ್.ಜಿ.ಒ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಇಲಾಖೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಿದರೆ ಯಾವುದೇ ರೀತಿಯ ಕಾರ್ಯವನ್ನು ಸಾಧಿಸಬಹದು ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಇಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ರೀತಿಯ ಸಹಾಯಧನವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ  ಮೊದಲು ಸ್ಪಂದಿಸುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆಯಾಗಿದೆ. ಈ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದೆಂದರೆ ನಿಜಕ್ಕೂ ಅತಿ ಸಂತಸದ ವಿಷಯವಾಗಿದೆ ಯಾಕೆಂದರೆ ಜನರಿಗೆ ಅವರ ಕಷ್ಟ ಕಾಲದಲ್ಲಿ ಸಹಾಯ ಮಾಡಿದಾಗ ಅವರಲ್ಲಿ ಮೂಡುವ ಮುಗುಳ್ನಗೆ ಮನಸ್ಸಿಗೆ ಸಂತೃಪ್ತ ಭಾವವನ್ನು ನೀಡುತ್ತದೆ ಎಂದು ಹೇಳಿದರು.

ಸಾರ್ವಜನಿಕರು ಕೂಡ ಯಾವುದೇ ರೀತಿಯ ತೊಂದರೆಯಾದ ಸಂದರ್ಭದಲ್ಲಿ ಕಂದಾಯ ಇಲಾಖೆಯ ಮುಖಾಂತರ ನಮ್ಮನ್ನು ಸಂಪರ್ಕಿಸಬಹುದು ನಾವು ನಮ್ಮ ಕೈಲಾದ ಸಹಾಯವನ್ನು ಮಾಡಲು ಯಾವಾಗಲೂ ತಯಾರಿರುವುದಾಗಿ ತಿಳಿಸಿದರು.

ಸಹಾಯಧನ ವಿತರಣೆಯಲ್ಲಿ ಇದು ಮೂರನೇ ಹಂತದ ಕಾರ್ಯಕ್ರಮವಾಗಿದ್ದು, ಪ್ರಥಮ ಹಂತದಲ್ಲಿ 9,10,000 ರೂ., ಎರಡನೇ ಹಂತದಲ್ಲಿ 6,10,000 ರೂಗಳು ಹಾಗೂ ಮೂರನೇ ಹಂತದಲ್ಲಿ 5,70,000 ರೂಗಳು ಮಾತ್ರವಲ್ಲದೆ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳಕೊಂಡವರಿಗೆ 2,10,000 ರೂಗಳ ಪರಿಹಾರ ಧನವನ್ನು ಶಾಸಕರು ವಿತರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ತಹಶೀಲ್ದಾರ್ ಮೋಹನ್ ರಾವ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಲತೀಫ್, ಪ್ರಕಾಶ್, ಕಂದಾಯ ನಿರೀಕ್ಷಕ ಹಸನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English