ಮುಖ್ಯಮಂತ್ರಿಗಳಿಂದ ಪುತ್ತೂರಿನಲ್ಲಿ ನಾಳೆ ಭಾಗ್ಯಲಕ್ಷ್ಮಿ ಮತ್ತು ಇತರ ಯೋಜನೆಗಳಿಗೆ ಚಾಲನೆ

5:12 PM, Tuesday, November 16th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಭಾಗ್ಯಲಕ್ಷ್ಮಿ ಪತ್ರಿಕಾಗೋಷ್ಠಿ ಮಂಗಳೂರು:  ಪುತ್ತೂರಿನಲ್ಲಿ ನಾಳೆ ನಡೆಯಲಿರುವ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಉಚಿತ ಆರೋಗ್ಯ ತಪಾಸಣೆ, ಬಾಂಡ್ ವಿತರಣೆ, ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ನಡೆಯಿತು.

ಭಾಗ್ಯಲಕ್ಷ್ಮಿ ಪತ್ರಿಕಾಗೋಷ್ಠಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣ ಜೆ ಪಾಲೆಮಾರ್ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ನೊಂದಾಯಿತ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಮಾಡಿಸಿಕೊಂಡ ತಾಯಂದಿರಿಗೆ ಪ್ರೋತ್ಸಾಹ ನೀಡಲು ಮಾನ್ಯ ಮುಖ್ಯ ಮಂತ್ರಿಗಳು ಮಕ್ಕಳ ತಾಯಂದಿರಿಗೆ ಸೀರೆ ಹಂಚುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಾಕಿಕೊಂಡಿದ್ದು, ದಿನಾಂಕ 17-11-2010 ರಂದು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಈ ಕಾರ್ಯಕ್ರಮವನ್ನು ಪೂರ್ವಾಹ್ನ 12.30 ಗಂಡೆಗೆ ಉದ್ಘಾಟಿಸಲಿದ್ದಾರೆ.

ಭಾಗ್ಯಲಕ್ಷ್ಮಿ ಪತ್ರಿಕಾಗೋಷ್ಠಿ ಸಮಾರಂಭದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀಮತಿ ಮಲ್ಲಿಕಾ ಪ್ರಸಾದ್ ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ ವಹಿಸಲಿರುವರು, ಸನ್ಮಾನ್ಯ ಶ್ರೀ ಜೆ. ಕೃಷ್ಣ ಪಾಲೇಮಾರ್, ಮುಜರಾಯಿ ಇಲಾಖೆ ಸಚಿವರು, ಸನ್ಮಾನ್ಯ ಶ್ರೀ ಸಿ.ಸಿ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಕರ್ನಾಟಕ ಸರಕಾರ, ಸನ್ಮಾನ್ಯ ಡಾ. ವಿ.ಎಸ್ ಆಚಾರ್ಯ, ಉನ್ನತ ಶಿಕ್ಷಣ ಇಲಾಖೆ ಸಚಿವರು, ಕರ್ನಾಟಕ ಸರಕಾರ ಮೊದಲಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವರು.
ಈ ಕಾರ್ಯಕ್ರಮಕ್ಕೆ ಜಿಲ್ಲಾದ್ಯಾಂತ 11,987 ತಾಯಂದಿರು ಹಾಗೂ 12,983 ಮಕ್ಕಳು ಭಾಗವಹಿಸಲಿದ್ದು, ಸಮಾರಂಭದ ಪೂರ್ವಸಿದ್ಧತೆ ನಡೆಯುತ್ತಿದೆ. ಈ ಸಮಾರಂಭಕ್ಕೆ ಹಾಜರಾಗಲು ಫಲಾನುಭವಿಗಳಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 232 ಬಸ್ಸುಗಳನ್ನು ಒದಗಿಸಲು ಕರ್ನಾಟಕ  ರಾಜ್ಯ ರಸ್ತೆ ನಿಗಮಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿದೆ. ಪ್ರತಿ ಬಸ್ಸಿನಲ್ಲಿ 50 ಫಲಾನುಭವಿಗಳು, 50 ಮಕ್ಕಳನ್ನು ಕರಕೊಂಡು ಬರಲು ಹಾಗೂ ಅವರ ಮೇಲ್ವಿಚಾರಣೆಗಾಗಿ 5 ಜನ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಸಂಪೂರ್ಣ ಬಸ್ಸಿನ ಮೇಲ್ವಿಚಾರಣೆಗಾಗಿ ಒಬ್ಬರು ರೂಟ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪುತ್ತೂರು ಪುರಸಭೆಯವರು ಒದಗಿಸಲಿದ್ದಾರೆ. ಸಮಾರಂಭದಲ್ಲಿ ಭಾಗವಹಿಸುವ ಭಾಗ್ಯಲಕ್ಷ್ಮಿ ಯೋಜನೆಯ ಮಕ್ಕಳ ವಿಶೇಷ ತಪಾಸಣೆಗಾಗಿ ಪ್ರತಿ ತಾಲೂಕಿಗೆ ಒಂದರಂತೆ ಸಭಾಂಗಣದ ಮುಂಭಾಗದಲ್ಲಿ ಕೌಂಟರ್ ಗಳನ್ನು ನಿರ್ಮಿಸಿ ಅದರಲ್ಲಿ ತಜ್ಞ ವೈದ್ಯರು (ಮಕ್ಕಳ, ಸ್ತ್ರೀ ರೋಗ, ಚರ್ಮ ರೋಗ, ಕಿವಿ, ಮೂಗು ಮತ್ತು ಗಂಟಲು) ಶಶ್ರೂಷೆಗೆ ಹಾಗೂ ಆರೋಗ್ಯ ಸಹಾಯಕಿಯರು ಪ್ರತಿ ಬೂತ್ ನಲ್ಲಿ ವೈದ್ಯಾಧಿಕಾರಿಯೊಂದಿಗೆ ಇರುತ್ತಾರೆ.
ಸಮಾರಂಭದ ದಿನ ವಿವಿಧ ತಾಲೂಕುಗಳಿಂದ ಬೇರೆ ಬೇರೆ ಮಾರ್ಗದಲ್ಲಿ ಬರುವ ಬಸ್ಸುಗಳನ್ನು ಆಯಾ ತಾಲೂಕುಗಳಿಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಿಗೆ ಕಳುಹಿಸಲು ರಸ್ತೆಗಳಲ್ಲಿ ಸುಮಾರು 400 ಮಂದಿ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಸಮಾರಂಭದ ಪೂರ್ಣ ಭದ್ರತಾ ವ್ಯವಸ್ಥೆಯನ್ನು ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತದೆ.
ಸಮಾರಂಭಕ್ಕೆ ವಿವಿಧ ತಾಲೂಕುಗಳಿಂದ ಫಲಾನುಭವಿಗಳು ಬರುವ ಪ್ರತಿ ಬಸ್ಸಿನಲ್ಲಿ ತಲಾ 5 ಜನ ಅಂಗನವಾಡಿ ಕಾರ್ಯಕರ್ತೆಯನ್ನು ಸ್ವಯಂ ಸೇವಕರಾಗಿ ನೇಮಿಸಿದ್ದು, ಅವರು ತಲಾ 10 ಜನ ಫಲಾನುಭವಿಗಳಿಗೆ  ಮೇಲ್ವಿಚಾರಣೆಯನ್ನು ಮಾಡುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯೋಗೀಶ್ ಭಟ್ ಹಾಗೂ ಜಿಲ್ಲಾಧಿಕಾರಿ ಸುಭೋದ್ ಯಾದವ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English