ಸಿಐಡಿ ಪೊಲೀಸರ ಬಗ್ಗೆ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ : ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ

2:33 PM, Saturday, September 7th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Dyfcಮಂಗಳೂರು: ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಅಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೆ.6 ರಂದು 24 ಗಂಟೆಗಳ ಹಗಲು ರಾತ್ರಿ ಧರಣಿ ನಡೆಯಿತು.

ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಬಗ್ಗೆ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ. ಅವರು ಎರಡೂ ಕುಟುಂಬಗಳನ್ನು ಜಗಳಕ್ಕೆ ಬಿಟ್ಟು ಶಾಂತಿ ಕದಡಿದ್ದಾರೆ ಎಂದು ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಇದರಿಂದ ಇದೀಗ ಆ ಕುಟುಂಬಗಳಲ್ಲಿ ಜಗಳ ನಡೆಯುತ್ತಿದ್ದು, ಪಂಜಿಮೊಗರು ಪರಿಸರದಲ್ಲಿ ಸಿಐಡಿ ಅಧಿಕಾರಿಗಳು ಶಾಂತಿ ಕದಡಿದ್ದಾರೆ. ಮಂಗಳೂರು ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ನಿಷ್ಕ್ರೀಯವಾಗಿದೆ. ಒಂದೇ ಒಂದು ಕೊಲೆ ಪ್ರಕರಣ ಪತ್ತೆ ಹಚ್ಚಲು ಇವರಿಂದ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ದಕ್ಷ ಮತ್ತು ಪ್ರ್ರಾಮಾಣಿಕ ಅಧಿಕಾರಿಗಳಿಗೆ ಕೊರತೆಯಿದೆ. ಇದರಿಂದಾಗಿ ಸಣ್ಣ ಸಣ್ಣ ಗಲಾಟೆ ಮಾಡಿ ಜೈಲು ಸೇರುವ ಪುಡಿ ರೌಡಿಗಳು ಕೂಡ ನ್ಯಾಯಾಲಯದ ಆವರಣದಲ್ಲಿ ಹೀರೋಯಿ ಸಂ ತೋರಿಸುತ್ತಿದ್ದಾರೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೂ ಸ್ವಲ್ಪವೂ ಬದ ಲಾವಣೆಯಾಗಿಲ್ಲ. ಮುಂದಿನ ದಿನಗಳಲ್ಲಿ ಪಂಜಿ ಮೊಗರು ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಯಾಗದಿದ್ದಲ್ಲಿ ಸುರತ್ಕಲ್ ಶಾಸಕರ ಮನೆಗೆ `ಗೃಹ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ರಮಾನಾಥ್ ರೈಗೆ ಕಪ್ಪು ಬಾವುಟ ಹಿಡಿಯುತ್ತೇವೆ. ಇದಕ್ಕೂ ಕ್ಯಾರೇ ಅನ್ನದಿದ್ದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಅಡ್ಡಹಾಕಿ ಪ್ರಶ್ನೆ ಮಾಡುವ ಮೂಲಕ ವಿಧಾನಸೌಧದ ಮುಂದೆ ಇಡೀ ಪಂಜಿಮೊಗರಿನ ನಾಗರಿಕರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಪಂಜಿಮೊಗರು ಘಟಕದ ಅಧ್ಯಕ್ಷ ಬಶೀರ್ ಅಹ್ಮದ್,ಕಾರ್ಮಿಕ ಮುಖಂಡ ವಸಂತ್ ಆಚಾರಿ, ಸೌಮ್ಯ ಪಿ.ಎಂ, ಸಂತೋಷ್ ಬಜಾಲ್, ಕಾರ್ಪೊರೇಟರ್ ದಯಾನಂದ ಶೆಟ್ಟಿ , ಅನಿಲ್ ಡಿ’ಸೋಜಾ, ಜಯಂತ್ ಬಿ.ಶೆಟ್ಟಿ, ಪ್ರಮೀಳ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.Dyfc

Dyfc

Dyfc

Dyfc

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English