ಸ್ವಾಮಿ ವಿವೇಕಾಂದರ 150ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನಿನಲ್ಲಿ ‘ಭಾರತ್‌ ಜಾಗೋ ದೌಡ್‌’ ಕಾರ್ಯಕ್ರಮ

11:28 AM, Thursday, September 12th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

swami-vivekanandaಮಂಗಳೂರು : ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯ ಅಂಗವಾಗಿ ಹಾಗೂ 1893ರ ಸೆ. 11ರಂದು ಅಮೆರಿಕಾದ ಚಿಕಾಗೋದಲ್ಲಿ ಸ್ವಾಮೀಜಿಯವರು ಮಾಡಿದ ಭಾಷಣದ ನೆನಪಿಗಾಗಿ ಸ್ವಾಮಿ ವಿವೇಕಾಂದರ 150ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನಿನಲ್ಲಿ   ‘ಭಾರತ್‌ ಜಾಗೋ ದೌಡ್‌’ ಕಾರ್ಯಕ್ರಮ ಬುಧವಾರ  ನಡೆಯಿತು.

ನಗರದ ಜ್ಯೋತಿವೃತ್ತದಿಂದ ಕೇಂದ್ರ ಮೈದಾನಿನವರೆಗೆ ‘ಭಾರತ್‌ ಜಾಗೋ ದೌಡ್‌’ (ಭಾರತಕ್ಕಾಗಿ ಓಟ) ಹಮ್ಮಿಕೊಳ್ಳಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಓಟಕ್ಕೆ ಚಾಲನೆ ನೀಡಿದರು.

swami-vivekanandaರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ  ಅಖಂಡ ಭಾರತ ನಿರ್ಮಾಣಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ವಿವೇಕಾನಂದರು ಪ್ರತಿ ಯುವಕ ಯುವತಿಯರಲ್ಲಿ ಇದ್ದಾರೆ. ಅವರ ಸಂದೇಶಗಳನ್ನು ಪಾಲಿಸುವುದರೊಂದಿಗೆ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಯುವ ಪೀಳಿಗೆಯ ಮುಂದಿದೆ , ಯುವ ಸಮೂಹ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ತೊಡಬೇಕು. ಮಾನವತೆಯ ಪ್ರಜ್ಞೆಯೊಂದಿಗೆ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಶಕ್ತಿಶಾಲಿ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಅಖಂಡ ಭಾರತ ನಿರ್ಮಾಣದ ಕನಸು ಕಂಡ ಸ್ವಾಮಿ ವಿವೇಕಾನಂದರು, ದೇಶದ ಉನ್ನತಿಗಾಗಿ ಶ್ರಮಿಸಿದರು. ಸರ್ವರೂ ಸಂಘಟಿತರಾಗಿ ಹೋರಾಡಿದಾಗ ಯಶಸ್ಸು ಸಾಧ್ಯ ಎಂದ ಸ್ವಾಮೀಜಿಯವರು, ಉತ್ತಮ ಸಂದೇಶಗಳ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಪಣತೊಟ್ಟರು. ಅವರ ಸಂದೇಶ, ತತ್ವಾದರ್ಶಗಳನ್ನು ಇಂದಿನ ಯುವಕರು ಪಾಲಿಸಬೇಕು ಎಂದು ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.

swami-vivekanandaಸಮಿತಿಯ ಪ್ರಮುಖರಾದ ವಕೀಲ ರವಿಚಂದ್ರ ಪಿ.ಎಂ. ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಹರ್ಷವರ್ಧನ ಯು.ಕೆ. ವಂದಿಸಿದರು. ಕಾರ್ಯದರ್ಶಿ ಕ್ಯಾ| ಬೀಜೇಶ್‌ ಚೌಟ ನಿರೂಪಿಸಿದರು. ಕರ್ನಾಟಕ ಬ್ಯಾಂಕಿನ ಮುಖ್ಯ ಪ್ರಬಂಧಕ ಶ್ರೀನಿವಾಸ್‌ ದೇಶಪಾಂಡೆ, ಕಾರ್ಪೋರೇಶನ್‌ ಬ್ಯಾಂಕಿನ ಎಜಿಎಂ ಗೋವಿಂದ ಪೈ ಮುಖ್ಯ ಅತಿಥಿಗಳಾಗಿದ್ದರು.

ಈ ಕಾರ್ಯಕ್ರಮದಲ್ಲಿ  ಆರೆಸ್ಸೆಸ್‌ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ವಿಶ್ವ ಹಿಂದೂ ಪರಿಷತ್‌ನ ಜಗದೀಶ್‌ ಶೇಣವ, ಪ್ರಕಾಶ್‌ ಪಿ.ಎಸ್‌., ಸಂಸದ ನಳಿನ್‌ ಕುಮಾರ್‌ ಕಟೀಲ್‌, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಬಾಲಕೃಷ್ಣ ಭಟ್‌, ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಯುವ ಸಮೂಹ ಪಾಲ್ಗೊಂಡರು. swami-vivekananda

swami-vivekananda

swami-vivekananda

swami-vivekananda

swami-vivekananda

swami-vivekananda

swami-vivekananda

swami-vivekananda

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English