ಮಂಗಳೂರು : ಹಿಂದೂ ಯುವಸೇನೆಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕೇಂದ್ರ ಮೈದಾನಿನ ಛತ್ರಪತಿ ಶಿವಾಜಿ ಮಂಟಪದಲ್ಲಿ ಭಾನುವಾರ ಸಂಜೆ ಬಹಳ ವಿಜೃಭಂಣೆಯಿಂದ ಜರಗಿತು. ಕಳೆದ 7 ದಿನಗಳಿಂದ ಆರ್ಶ್ರಾಧಿಸುತ್ತಿದ್ದ ಗಣಪತಿಯ ಉತ್ಸವ ಮೂರ್ತಿಯನ್ನು ವೈಭಯುತ ಶೋಭಾಯಾತ್ರೆಯ ಮೂಲಕ ವಿಸರ್ಜಿಸಲಾಯಿತು.
ಭಾನುವಾರ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಪೂಜಾಕಾರ್ಯಕ್ರಮಗಳು ನಡೆದವು, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯ ಬಳಿಕ ಸಂಜೆ ಆರಂಭಗೊಂಡ ವೈಭವದ ಶೋಭಯಾತ್ರೆ ಕೇಂದ್ರ ಮೈದಾನದಿಂದ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್, ರಥಬೀದಿಯಾಗಿ ಗಣಪತಿಯ ಉತ್ಸವ ಮೂರ್ತಿಯನ್ನು ಶ್ರೀ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸಾವಿರಾರು ಭಕ್ತರು ತಡರಾತ್ರಿಯವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತರಾದರು. ಕೇರಳದ ಚೆಂಡೆವಾದನ, ನಾಸಿಕ್ ಬ್ಯಾಂಡ್, ವಿವಿಧ ವಿನ್ಯಾಸದ ಟ್ಯಾಬ್ಲೊಗಳು, ಸ್ಥಭ್ದ ಚಿತ್ರಗಳು, ವಾದ್ಯ ಘೋಷಗಳೊಂದಿಗೆ ಗಣೇಶನ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ್ನು ಏರ್ಪಡಿಸಲಾಗಿತ್ತು.
ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ಶ್ರೀ ರಾಮ ಚಂದ್ರ ಚೌಟ, ಹಿಂದೂ ಯುವಸೇನೆಯ ಅಧ್ಯಕ್ಷ ಯಶೋಧರ ಚೌಟ, ಪ್ರಧಾನ ಕಾರ್ಯದರ್ಶಿ ನಾಗೇಶ್ ಬಜಿಲಕೇರಿ, ಜನಾರ್ದನ ಎಸ್ ಅರ್ಕುಳ, ಪದ್ಮನಾಭ ನಾವೂರು, ಮೋಹನ್ ಪಡೀಲ್, ದಿನಕರ ಶೆಟ್ಟಿ, ಧರ್ಮೇಂದ್ರ, ಹಾಗೂ ಸಂಘಟನೆಯ ಮತ್ತಿತರ ಪಧಾಧಿಕಾರಿಗಳು, ಸದಸ್ಯರು ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English