ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

5:49 PM, Thursday, November 18th, 2010
Share
1 Star2 Stars3 Stars4 Stars5 Stars
(No Ratings Yet)
Loading...

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆಮಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ವತಿಯಿಂದ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ ಉದ್ಘಾಟನೆ ಸಮಾರಂಭ ಇಂದು ಬೆಳಿಗ್ಗೆ ಬಾವುಟ ಗುಡ್ಡೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷರು ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆಬಳಿಕ ಮಾತನಾಡಿದ ಅವರು ಗ್ರಂಥಾಲಯ ಸೌಲಭ್ಯಗಳು ಗ್ರಾಮೀಣ ಮಟ್ಟದಲ್ಲಿ ಪಂಚಾಯತ್ಗಳ ಮೂಲಕ ಜನರಿಗೆ ತಲುಪುವಂತಾಗಬೇಕು, ಆಗ ಗ್ರಾಮೀಣ ಜನರಲ್ಲಿ ಹೊಸ ಹೊಸ ವಿಚಾರಗಳ ಬಗ್ಗೆ ಅರಿವು ಮೂಡುತ್ತದೆ ಎಂದು ಹೇಳಿದರು. ಮಂಗಳೂರು ಕೇಂದ್ರ ಗ್ರಂಥಾಲಯಕ್ಕೆ ಸರಕಾರದ ವತಿಯಿಂದ ಈಗಾಗಲೇ 28 ಲಕ್ಷ ರೂ ಬಿಡುಗಡೆಯಾಗಿದ್ದು ಸದ್ಯದಲ್ಲೇ ಸುಸಜ್ಜಿತ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ನಗರಪಾಲಿಕೆ ಮೇಯರ್ ರಜನಿ ದುಗ್ಗಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್. ಯೋಗೀಶ್ ಭಟ್, ರಾಜ್ಯ ಕೈಗಾರಿಕಾ ಹಾಗೂ ಬಂಡವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ರಂಗನಾಥ ಕಿಣಿ ನಗರಪಾಲಿಕೆ ಸದಸ್ಯರು, ಡಾ. ಅಮೃತ್ ಸೋಮೇಶ್ವರ್ ಖ್ಯಾತ ಸಾಹಿತಿಗಳು, ಇಸ್ಮಾಯಿಲ್ ಪ್ರಾಂಶುಪಾಲರು ಬದ್ರಿಯಾ ಕಾಲೇಜ್, ಕೆ. ವಿ ರಾಘವೇಂದ್ರ ಉಪನಿರ್ದೇಶಕ ನಗರ ಗ್ರಂಥಾಲಯ ಪ್ರಾಧಿಕಾರ ಮಂಗಳೂರು, ವೆಂಕಟೇಶ್ ಮುಖ್ಯ  ಗ್ರಂಥಾಧಿಕಾರಿ ಜಿಲ್ಲಾ ಗ್ರಂಥಾಲಯ ಮಂಗಳೂರು ಉಪಸ್ಥಿತರಿದ್ದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆಕೆ.ವಿ ರಾಘವೇಂದ್ರ ಸ್ವಾಗತಿಸಿ, ಗ್ರಂಥಪಾಲಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English