ಮಂಗಳೂರು : ಆಕೆಯ ವಯಸ್ಸು 56, ಹೆಸರು ಸೆಲಿನ್ ಡಿ’ಸೋಜ. ಒಂದು ವರ್ಷದ ಹಿಂದೆ ಬಾಯಿ ಕ್ಯಾನ್ಸರ್ ಗೆ ತುತ್ತಾಗಿ, ಜೀವನ ಚಕ್ರ ನಿಂತು ಹೋಗಿದೆ ಮಲಗಿದಲ್ಲಿಯೇ ಪರರ ಆಶ್ರಯ ಕೇಳುವಂತಾಗಿದೆ.
ಬಜಾಲ್ ವೀರನಗರದ, ಪೈಸಲ್ ನಗರದ ನಿವಾಸಿ ಸೆಲಿನ್ ಡಿ’ಸೋಜ ಮೂರು ವರ್ಷದ ಹಿಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಲೆ ತಿರುಗಿ ಬಿದ್ದು ಸಂಜೆಯವರೆಗೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಿದ್ದಲ್ಲಿಯೇ ಇದ್ದರು. ಸಂಜೆ ನೆರೆಯವರು ಇವರನ್ನು ಕರೆದಾಗಲೇ ಬಿದ್ದಿರುವ ವಿಷಯ ತಿಳಿದಿದ್ದು. ಅಷ್ಟು ಹೊತ್ತಿಗೆ ಇವರನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸೇರಿಸಲಾಯಿತಾದರು, ವೈದ್ಯರು ಪಾರ್ಶ್ವವಾಯು ಪೀಡಿತರಾಗಿರುವುದನ್ನು ಖಚಿತಪಡಿಸಿದರು.
ಸೆಲಿನ್ರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಬಾಡಿಗೆಯ ಆಟೊ ಒಡಿಸುತ್ತಾನೆ. ಇನ್ನೊಬ್ಬ ಮಗ ನವೀನ್ ಡಿ’ಸೋಜ 12 ವರ್ಷದ ಹಿಂಗೆ ನಂತೂರು ಬಳಿ ಸಂಭವಿಸಿದ ಭಿಕರ ರಸ್ತೆ ಅಪಘಾತದಲ್ಲಿ ತೀರಿ ಹೋಗಿದ್ದಾನೆ. ಮಕ್ಕಳು ಚಿಕ್ಕವರಾಗಿರುವಾಗಲೇ ಪತಿ ಗಿಲ್ಬರ್ಟ್ ಡಿ’ಸೋಜ ತೀರಿ ಹೋಗಿದ್ದಾರೆ.
ಸೆಲಿನ್ ಮನೆಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ, ಮಗ ದುಡಿದರೂ ಊಟ ಮಾಡಲು ಸಾಕಾಗುವುದಿಲ್ಲ, ಇವರ ಚರ್ಚ್ ಫಾಧರ್ ಮನೆಗೆ ಭೇಟಿ ನೀಡಿದ್ದಾರಾದರೂ ಏನು ಧನ ಸಹಾಯ ಮಾಡಿಲ್ಲ, ಸುತ್ತ ಮುತ್ತಲಿನ ಸಂಘ ಸಂಸ್ಥೆಯವರೂ ಇವರಿಗೆ ಧನ ಸಹಾಯ ನೀಡಿಲ್ಲ ಎಂದು ಅವರನ್ನು ನೋಡಿಕೊಳ್ಳುತ್ತಿರುವ ಅಕ್ಕ ಮರಿಯಾ ಡಿ’ಸೋಜ ಹೇಳಿದ್ದಾರೆ.
ಸೆಲಿನ್ ಫಾಧರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಡಾ| ಆಶ್ರಫ್ ಚಿಕಿತ್ಸೆಗಾಗಿ 5ರಿಂದ ಆರು ಲಕ್ಷ ಬೇಕಾಗಬಹುದೆಂದು ತಿಳಿಸಿದ್ದಾರೆ ಎಂದು ಸೆಲಿನ್ ಅಕ್ಕ ಮೇಗಾ ಮಿಡಿಯಾ ನ್ಯೂಸ್ನೊಂದಿಗೆ ತಿಳಿಸಿದ್ದಾರೆ.
ಮರಿಯಾ ಡಿ’ಸೋಜ ಸೆಲಿನ್ ಡಿ’ಸೋಜರ ಅಕ್ಕ. ಇವರ ಮನೆ ಬಾಳೆಪುಣಿ ಗ್ರಾಮದ ಗರೋಡಿಪಲ್ಲ ಹೌಸ್ ಎಂಬಲ್ಲಿದೆ. ಈಕೆಯ ಮಗ ಇಸ್ರೆಲ್ನಲ್ಲಿ ಕೆಲಸಕ್ಕೆ ಹೋಗಿ ಒಂದು ವರ್ಷ ಕಳೆದು ಒಮ್ಮೆ ಬಂದು ಹೋದವ ಇದುವರೆಗೂ ಬಂದಿಲ್ಲ, ಒಂದೂ ಪೋನ್ ಸಹ ಮಾಡಿಲ್ಲ ಎಂದು ಮರಿಯಾ ಹೇಳುತ್ತಾರೆ, ಆತ ಮದುವೆಯಾಗಿ ಒಂದು ಹೆಣ್ಣು ಮಗಳಿದ್ದಾಳೆ. ಆಕೆಗೆ ಆರು ವರ್ಷ, ಶಾಲೆಗೆ ಹೋಗುತ್ತಿದ್ದಾಳೆ. ಮಗ ಇಸ್ರೆಲಿಗೆ ಹೋಗಲು ಸಾಲ ಮೂಲ ಮಾಡಿ ದುಡ್ಡು ಕೊಟ್ಟಿದ್ದಾರೆ. ಇತ್ತ ದುಡ್ಡು ಇಲ್ಲ ಮಗನೂ ವಾಪಾಸು ಬರಲಿಲ್ಲ ಎಂದು ದು:ಖದಲ್ಲಿದ್ದಾರೆ. ಮರಿಯಾ ಗಂಡ ವಿದ್ಯಾವಂತನಾದರೂ ಇತ್ತಿಚೆಗೆ ಆದ ಎಕ್ಸಿಡೆಂಟ್ನಿಂದ ಹುಚ್ಚರಾಗಿದ್ದಾರೆ. ಇಷ್ಟೆಲ್ಲಾ ಕಷ್ಟ ಇದ್ದರೂ ಕ್ಯಾನ್ಸರ್ ಪೀಡಿತೆ ತಂಗಿಯನ್ನು ನೋಡಿಕೊಳ್ಳುವ ಔದಾರ್ಯತೆ ತೋರಿದ್ದಾರೆ. ತಂಗಿಯ ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಧನ ಸಹಾಯಕ್ಕಾಗಿ ಮೊರೆಹೋಗಿದ್ದಾರೆ.
ಸೆಲಿನ್ ಡಿ’ಸೋಜರ ಕ್ಯಾನ್ಸರ್ ಚಿಕಿತ್ಸೆಗಾಗಿ ಈ ಬ್ಯಾಂಕ್ ಖಾತೆಗೆ ಸಹೃದಯಗಳು ಧನಸಹಾಯ ಮಾಡಬಹುದು. ಮರಿಯಾ ಡಿ’ಸೋಜ, ವಿಜಯಾ ಬ್ಯಾಂಕ್, ಉಳ್ಳಾಲ. ಉಳಿತಾಯ ಖಾತೆ ಸಂಖ್ಯೆ 12150101100176, IFSC ಕೊಡ್ VIJB0001215, ದೂರವಾಣಿ ಸಂಖ್ಯೆ – 9449902237 (ಮರಿಯಾ ಡಿ’ಸೋಜ).
ವರದಿ : ಶಿವಪ್ರಸಾದ್ ,ಪ್ರಧಾನ ಸಂಪಾದಕರು
Click this button or press Ctrl+G to toggle between Kannada and English