ಕಾಸರಗೋಡು : ಸಿಪಿಎಂ ಕಾರ್ಯಕರ್ತ ಮಾಂಙಾಡ್ ನಿವಾಸಿ ಎಂ.ಬಿ.ಬಾಲಕೃಷ್ಣನ್(45) ನನ್ನು ಮಾರಕಾಯುಧಗಳಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಮುಖ್ಯ ಆರೋಪಿ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.
ಉದುಮ ಆರ್ಯಡ್ಕ ಕಾಲನಿ ನಿವಾಸಿ ಪ್ರಜಿತ್ ಯಾನೆ ಕುಟ್ಟಾಪಿ(25) ಎಂಬಾತನೇ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ಮುಂದೆ ಶರಣಾದಾತ.ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಪ್ರಜಿತ್ ನಿನ್ನೆ ಬೆಳಿಗ್ಗೆ 10.30ರ ವೇಳೆಗೆ ದಿಢೀರ್ ನ್ಯಾಯವಾದಿಯೊಬ್ಬರ ಜೊತೆಗೆ ಕೋರ್ಟಿನಲ್ಲಿ ಪ್ರತ್ಯಕ್ಷನಾಗಿದ್ದ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳಿದ್ದು, ಇತರ ಇಬ್ಬರು ಇನ್ನೂ ತಲೆಮರೆಸಿಕೊಂಡಿ ದ್ದಾರೆ. ಸರಕು ಲಾರಿಯ ಕ್ಲೀನರ್ ಆಗಿರುವ ಪ್ರಜಿತ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಇದರಿಂದಲೇ ಕೊಲೆಯು ರಾಜಕೀಯ ಪ್ರೇರಿತವಾಗಿ ನಡೆದಿರುವುದಾಗಿಯೂ, ಆರೋಪಿಗಳ ರಕ್ಷಣೆಗಾಗಿ ಆಡಳಿತ ಶಾಮೀಲಾತಿ ಬಳಸಲ್ಪಟ್ಟಿರುವುದಾಗಿಯೂ ಸಿ.ಪಿ.ಎಂ ಆರೋಪಿಸಿತ್ತು.
ಹೊಸದುರ್ಗ ಇನ್‌ಸ್ಪೆಕ್ಟರ್ ಬಾಬು ಪೆರಿಂಗೋತ್ತ್ ನೇತೃತ್ವದಲ್ಲಿ ತನಿಖೆ ಸಾಗುತ್ತಿದೆ.
Click this button or press Ctrl+G to toggle between Kannada and English