ಮಂಗಳೂರು: ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್, ಮಂಗಳೂರು ಇದರ ವತಿಯಿಂದ 57ನೇ ಅಖಿಲ ಭಾರತ ಸಹಕಾ ಸಪ್ತಾಹ – 2010 ಇದರ ಅಂಗವಾಗಿ ನಂದಿನಿ ಉತ್ಪನ್ನ ಮೈಸೂರ್ ಪಾಕ್ 100 ಗ್ರಾಂ ಪ್ಯಾಕ್ ಮಾರುಕಟ್ಟೆಗೆ ಬಿಡುಗಡೆ ಸಮಾರಂಭವು ದಿನಾಂಕ 18ನೇ ಗುರುವಾರ ಹೊಟೇಲ್ ಮಾಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಕೊಂಕೋಡಿ ಪದ್ಮನಾಭ ಅಧ್ಯಕ್ಷರು, ಕ್ಯಾಂಪ್ಕೊ ಲಿಮಿಟೆಡ್ ಇವರು ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಸಹಕಾರಿ ಸಪ್ತಾಹ ಸಿಹಿಯಾಗಬೇಕಾದರೆ ಇಡೀ ಸಪ್ತಾಹವೇ ಸಿಹಿಯಾಗಬೇಕು. ಸಹಕಾರಿ ರಂಗದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಸ್ವಚ್ಛ ಮನಸ್ಸಿನವರಾಗಿರಬೇಕು ಎಂದರು. ಸಹಕಾರಿ ಚಳುವಳಿಗೆ ಹಿರಿಯರು ಹಾಕಿದ ಕನಸುಗಳನ್ನು ಉಳಿಸಬೇಕಾದರೆ, ಉತ್ಪನ್ನಗಳ ಗುಣಮಟ್ಟಗಳನ್ನು ಉಳಿಸಬೇಕು ಖಾಸಗಿ ಸಂಸ್ಥೆಗಳೊಂದಿಗೆ ಪೈಪೋಟಿ ನೀಡಬೇಕಾದರೆ ಸಹಕಾರಿ ಸಂಘಗಳೆಲ್ಲವೂ ಕೈಜೋಡಿಸಬೇಕು ಎಂದು ಕೊಂಕೋಡಿ ಹೇಳಿದರು.
ಮೈಸೂರು ಪಾಕ್ನ 100 ಗ್ರಾಂ ಪ್ಯಾಕೇಟ್ ಬಿಡುಗಡೆಯನ್ನು ಎಸ್.ಆರ್ ರಂಗಮೂರ್ತಿ, ಮಾಜಿ ಅಧ್ಯಕ್ಷರು, ಕ್ಯಾಂಪ್ಕೊ ಲಿಮಿಟೆಡ್ ಮತ್ತು ಸದಸ್ಯರು, ಕರ್ನಾಟಕ ಲೋಕಸಭಾ ಅಯೋಗ, ಬೆಂಗಳೂರು ನೆರವೇರಿಸಿದರು. ಬಳಿಕ ಮಾತನಾಡಿ ನನಗೆ ಸಹಕಾರಿ ತತ್ವಗಳ ಜೀವನಾಂಶಗಳನ್ನು ತಿಳಿಸಿಕೊಟ್ಟ ಸಂಸ್ಥೆ ಹಾಲು ಉತ್ಪಾದಕರ ಒಕ್ಕೂಟ, ರೈತನಾಗಿ ದುಡಿದು ಅಂದಿನ ದಿನಗಳಲ್ಲಿ ಕಲಿತ ಪಾಠ. ಇಂದು ಸಹಕಾರಿ ಸಂಸ್ಥೆಯಲ್ಲಿ ಕೆಲಸಮಾಡವ ಹುರುಪು ನೀಡಿದೆ. ರೈತ ಸಂಕಷ್ಟದಲ್ಲಿದ್ದರೆ ಸಹಕಾರಿ ಸಂಘಗಳೇ ಬದುಕಿಸಿದೆ ಎಂದು ಅವರು ಹೇಳಿದರು.
ಶ್ರೀ ಪಿ.ಬಿ ದಿವಾಕರ ರೈ, ಅಧ್ಯಕ್ಷರು, ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್, ಮಂಗಳೂರು ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಂ. ಎಸ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು, ಸೀತಾರಾಮ ರೈ, ನಿರ್ದೇಶಕರು, ದಿವಾಕರ ಶೆಟ್ಟಿ, ನಿರ್ದೇಶಕರು, ಪಿ.ಆರ್ ಪಳ್ಳಂಗಪ್ಪ, ಕೆ.ಸಿ.ಎಸ್, ಸಹಕಾರ ಸಂಘಗಳ ಉಪ ನಿರ್ಬಂಧಕರು, ಡಾ. ಕೆ.ವಿ ಹಲಗಪ್ಪ, ಉಪ ನಿರ್ದೇಶಕರು, ಪಶು ಸಂಗೋಪನೆ ಮತ್ತು ಪಶು ವೈದಕೀಯ ಇಲಾಖೆ, ಮಂಗಳೂರು, ಪದ್ಮನಾಭ ಶೆಟ್ಟಿ ಅರ್ಕಜೆ ನಿರ್ದೇಶಕರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
ರವಿರಾಜ ಶೆಟ್ಟಿ, ಅಧ್ಯಕ್ಷರು ಸ್ವಾಗತಿಸಿದರು ಹಾಗೂ ಚಂದ್ರಶೇಖರ ನಾಯಕ್, ನಿರ್ವಾಹಕ ನಿರ್ದೇಶಕರು ವಂದನಾರ್ಪಣೆ ಸಲ್ಲಿಸಿದರು.
Click this button or press Ctrl+G to toggle between Kannada and English