ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಶಂಕರ್ ಭಟ್ ಅಗಲೀಕರಣಕ್ಕೆ ಕಲ್ಲಡ್ಕ ಪೇಟೆಯನ್ನೇ ಬಲಿಕೊಡುವ ಹುನ್ನಾರ ನಡೆಯುತ್ತಿದೆ. ಇದರಿಂಧಾಗಿ 30 ಅಂಗಡಿ ಮುಂಗಟ್ಟುಗಳು ಸರಿಸುಮಾರು 200 ಮನೆಗಳು ನಾಶವಾಗುವ ಭೀತಿಯಲ್ಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ಬಿ.ಸಿ.ರೋಡು ಚತುಷ್ಪಥ ರಸ್ತೆ ನಿರ್ಮಾಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಾಧಿಕಾರಿಯವರ ಆದೇಶದಂತೆ ಕಲ್ಲಡ್ಕ ಪೇಟೆಯ ಇಕ್ಕೆಲಗಳಲ್ಲಿ 22.5 ಮೀಟರ್ ಸ್ವಾದೀನಪಡಿಸುವಂತೆ ಈಗಾ ಗಲೇ ಗುರುತು ಹಾಕಲಾಗಿದೆ. ಇದರಂತೆ ನಡೆದರೆ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಎಲ್ಲಾ ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು ನಾಶವಾಗಲಿದೆ ಎಂದು ಶಿವಶಂಕರ್ ಭಟ್ ಆರೋಪಿಸಿದರು.
ಈ ಚತುಷ್ಪದದಿಂದಾಗಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಕಲ್ಲಡ್ಕದ ‘ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಕಲ್ಲಡ್ಕ’ ಎಂಬ ಹೆಸರಿನಲ್ಲಿ ಹೋರಾಟ ಸಮಿತಿಯನ್ನು ರಚಿಸಿ ಕಾರ್ಯಮಗ್ನರಾಗಿದ್ದೇವೆ. ಬೈಪಾಸ್ ರಸ್ತೆ ಅಥವಾ ಸಮಾನಂತರ ರಸ್ತೆಯನ್ನು ನಿರ್ಮಿಸಿ, ಕಲ್ಲಡ್ಕ ಪೇಟೆಗೆ, ಇಲ್ಲಿನ ಜನವಸತಿ ಪ್ರದೇಶಗಳಿಗೆ ಆದಷ್ಟು ತೊಡಕು ಉಂಟಾಗದಂತೆ ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಅವರು ಆಗ್ರಹಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ದಿನೇಶ್ ಶೆಣೈ, ಪದ್ಮನಾಭ , ರೋನಾಲ್ಡ್ ಡಿ ಸೋಜ, ಮೊಹಮ್ಮದ್ ಝಾಕರೀಯ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English