ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ

7:48 PM, Friday, November 19th, 2010
Share
1 Star2 Stars3 Stars4 Stars5 Stars
(No Ratings Yet)
Loading...

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲೆಯ ಕ್ರಿಯಾಶೀಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ವರುಷದ ಹರುಷ 2010 ಶೀರ್ಷಿಕೆಯ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಹಬ್ಬ ಉದ್ಘಾಟನಾ ಸಮಾರಂಭವು ಇಂದು  ಬೆಳಿಗ್ಗೆ ಮಿಲಾಗ್ರೀಸ್ ಪದವಿಪೂರ್ವ ಕಾಲೇಜು ಸಂಕೀರ್ಣ, ಹಂಪನ್ ಕಟ್ಟಾ, ಮಂಗಳೂರು ಇದರ ಆವರಣದಲ್ಲಿ ನಡೆಯಿತು.
ಶೈಕ್ಷಣಿಕ ಹಬ್ಬದ ಉದ್ಘಾಟನೆಯನ್ನು ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಇಡಲಾದ ಬೃಹತ್ ಶಿಲ್ಪವನ್ನು ಉದ್ಘಾಟನೆಗೊಳಿಸುವ ಮೂಲಕ ಫಾ. ಡೆನ್ನಿಸ್ ಡೇಸಾ ಆಡಳಿತ ನಿರ್ದೇಶಕರು, ಫಾದರ್ ಮುಲ್ಲರ್ಸ್ ಆಸ್ಪತ್ರೆ ಇವರು ಚಾಲನೆ ನೀಡಿದರು.

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ ಚಿತ್ರಕಲಾ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.  ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ ಮಿಲಾಗ್ರಿಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಫಾ. ಲಾರೆನ್ಸ್ ಡಿ ಸೋಜಾ ಮಾತನಾಡಿ ಮನುಷ್ಯ ತಾಣು ಹುಟ್ಟುವಾಗಲೇ ಯಾವುದಾದರೊಂದು ವಿಶಿಷ್ಟ ಕಲೆಯನ್ನು ಮೈಗೂಡಿಸಿಕೊಂಡೇ ಜನಿಸುತ್ತಾನೆ. ಅವನು ಬೆಳೆಯುತ್ತಾ ತನ್ನ ವಿಚಾರಗಳನ್ನು ನಾನಾ ರೀತಿಯ ಕಲೆಗಳ ಮೂಲಕ ತೋರ್ಪಡಿಸುತ್ತಾನೆ ಎಂದು ಹೇಳಿದರು.

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ ಚಿತ್ರಕಲಾ ಶಿಕ್ಷಕರ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದ ಗೋಪಾಡ್ಕರ್ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಲಾವಿದನಿರುತ್ತಾನೆ. ಆತ ಅದನ್ನು ತೋರ್ಪಡಿಸಿದಲ್ಲಿ ಅದು ಕಲಾ ರೂಪದಲ್ಲಿ ಹೊರಬರುತ್ತದೆ. ಮನುಷ್ಯ ತನ್ನ ವಿಚಾರಗಳ ಮಿಶ್ರಣಗಳನ್ನು ಕಲೆಯ ಮೂಲಕ  ಚಿತ್ತಾರಗೊಳಿಸುವುದರಿಂದ ಆತನಿಗೆ ತೃಪ್ತಿ ಇದೆ ಎಂದು ಅವರು ಹೇಳಿದರು.

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ನಡೆಯುವ ಚಿತ್ರಕಲಾ ಶಿಕ್ಷಕರ ಹಬ್ಬದಲ್ಲಿ ಥರ್ಮೋ ಪಾಮ್ ಚಿತ್ರ ಪ್ರದರ್ಶನ, ನಿವೃತ್ತ ಶಿಕ್ಷಕರಿಗೆ ಅಭಿನಂದನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದೆ. ಶನಿವಾರ ಸಂಜೆ 3 ಗಂಟೆಗೆ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಸ್ ಎಲ್ ಶೇಟ್, ಡೈಮಂಡ್ಸ್ ಮಾಲಕರಾದ ಎಂ. ರಘುನಾಥ್ ಶೇಟ್, ಬ್ಲಾಕ್ ಎಜ್ಯುಕೇಷನ್ ಆಫೀಸರ್ ದಯಾವತಿ, ಕೋಟಿ ಪ್ರಸಾದ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟಕ ಗಣೇಶ್ ಸೋಮಯಾಜಿ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸತ್ಯನಾರಾಯಣ ಹಾಗೂ ತಾರನಾಥ ಕೈರಂಗಳ ಇವರು ನೆರವೇರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English