ಮಂಗಳೂರು ದಸರಾ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಂದ 101ನೇ ದಸರಾ ಮಹೋತ್ಸವ ಉದ್ಘಾಟನೆ

11:03 AM, Tuesday, September 24th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

kudroli

ಮಂಗಳೂರು : ಕುದ್ರೋಳಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ನಗರದ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಅಕ್ಟೋಬರ್ 5 ರಿಂದ 14 ರವರೆಗೆ ಮಂಗಳೂರು ದಸರಾ -2013 ನ್ನು ಆಚರಿಸಲಾಗುವುದು ಎಂದು  ತಿಳಿಸಿದರು.

ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಎಸ್. ಸಾಯಿರಾಮ್, ಅಕ್ಟೋಬರ್ 5ರಂದು ಬೆಳಿಗ್ಗೆ 11.30 ಕ್ಕೆ ಕ್ಷೇತ್ರದ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ಸ್ವರ್ಣ ಕಲಾಮಂಟಪದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರು ಸೇರಿದಂತೆ ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಈ ಬಾರಿಯ ದಸರಾ ಹಾಗೂ ಕ್ಷೇತ್ರದ 101ನೇ ವಾರ್ಷಿಕೋತ್ಸವವನ್ನು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಈ ಬಾರಿಯೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರತಿ ದಿನ ಸಂಜೆ 6.30ರಿಂದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವಂತಹ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 14 ರಂದು ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಸಂಜೆ 4ಕ್ಕೆ ಮಂಗಳೂರು ದಸರಾ-2013 ರ ಬೃಹತ್ ಮೆರವಣಿಗೆ ಶಾರದಾ ಮಾತೆ, ನವದುರ್ಗೆಯರು, ಮಹಾಗಣಪತಿ ಹಾಗೂ ನಾರಾಯಣ ಗುರುಗಳ ವಿಗ್ರಹಗಳೊಂದಿಗೆ ನಗರದ ರಾಜರಸ್ತೆಗಳಲ್ಲಿ ಸಾಗಲಿದೆ ಎಂದು  ತಿಳಿಸಿದರು.

ಈ ಮೆರವಣಿಗೆಯಲ್ಲಿ ಕರಾವಳಿ ಹಾಗೂ ರಾಜ್ಯದ ಹಲವು ಕಡೆಗಳಿಂದ ಆಗಮಿಸುವ ನೂರಾರು ಸ್ತಬ್ದ ಚಿತ್ರಗಳು, ಚೆಂಡೆ ವಾದನಗಳು ಹಾಗೂ ಇತರ ಕಲಾತಂಡಗಳು ಭಾಗವಹಿಸಲಿವೆ. ನಗರದ ಮುಖ್ಯ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗುವುದು. 10 ದಿನಗಳ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ವಿವರಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ ಆರ್., ಸದಸ್ಯರಾದ ಬಿ.ಕೆ. ತಾರನಾಥ್, ಕೆ. ಮಹೇಶ್ಚಂದ್ರ, ಬಿ.ದೇವೆಂದ್ರ ಪೂಜಾರಿ, ಡಾ| ಬಿ.ಜಿ.ಸುವರ್ಣ, ಬಿ.ದೇವದಾಸ್ ಕಾಂಟ್ರಕ್ಟರ್, ಡಾ| ಅನಸೂಯ, ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ಬಿ.ಟಿ.ಸಾಲ್ಯನ್, ಲೀಲಾಕ್ಷ ಕರ್ಕೇರಾ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English