ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರು ವಾರ್ಡ್ 52ಕ್ಕೆ ಶಾಸಕ ಜೆ.ಆರ್ ಲೋಬೊ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಶೀಲಿಸಿದರು.
ಅಲ್ಲಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಡ್ರೈನೇಜ್ ಹಾಗೂ ರಸ್ತೆ ದುರವಸ್ಥೆ.
ಸುಮಾರು 300 ಮನೆಗಳು ರೈಲ್ವೆ ಹಳಿಯ ಪಕ್ಕದಲ್ಲಿರುವುದರಿಂದ ರೈಲು ಹಳಿ ದಾಟುವ ಸಂದರ್ಭ ತೊಂದರೆಗಳುಂಟಾಗುತ್ತದೆ. ರೈಲ್ವೆ ಹಳಿ ದಾಟುವ ವ್ಯವಸ್ಥೆಯನ್ನು ಆದ್ಯತೆಯ ಆಧಾರದ ಮೇರೆಗೆ ನಡೆಸಬೇಕಾಗಿದೆ.
ಅಲ್ಲಿನ ಸಮಸ್ಯೆಗಳನ್ನೆಲ್ಲಾ ಪರಿಶೀಲಿಸಿ ಜನರ ಅಗತ್ಯತೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ವಾರ್ಡ್ ಅಧ್ಯಕ್ಷ ಉಮರಬ್ಬ, ಮೊಹಮ್ಮದ್ ಶರೀಫ್, ಅಹ್ಮದ್ ಬಾವಾ ಬಳ್ಳೂರುಗುಡ್ಡೆ, ಉಸ್ಮನ್ ಬೀಡು, ಹೈದರ್ ಬಳ್ಳೂರು ಗುಡ್ಡೆ, ಮೊಹಮ್ಮದ್ ಕುಂಡಲ, ಶರೀಫ್ ಕುಂಡಲ, ಖಾಲಿದ್ ಕಾಕಾ, ಕಾಂಗ್ರೆಸ್ ನಾಯಕರುಗಳಾದ ಮೋಹನ್ ಮೆಂಡನ್, ಜಯಕರ್ ಸಮರ್ಥ, ಮತ್ತು ಕೃತಿನ್ ಕುಮಾರ್ ಮುಂತಾದವರು ಶಾಸಕರ ಜೊತೆಗಿದ್ದರು.
Click this button or press Ctrl+G to toggle between Kannada and English