ಕ್ರಡಾಯ್ ಸಂಸ್ಥೆಯ ವತಿಯಿಂದ ನಗರದ ಡಾ| ಟಿ‌ಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ “ರಿಯಲ್ಟಿ ಎಕ್ಸ್‌ಪೊ – 2013

12:08 PM, Friday, September 27th, 2013
Share
1 Star2 Stars3 Stars4 Stars5 Stars
(4 rating, 4 votes)
Loading...

press-meet-ಮಂಗಳೂರು  :ಮಂಗಳೂರಿನ ಕ್ರೆಡಾಯ್ ಸಂಸ್ಥೆಯ ಅಧ್ಯಕ್ಷ ಪುಷ್ಪರಾಜ್ ಜೈನ್  ಸೆ. 28ಮತ್ತು 29ರಂದು ನಗರದ ಡಾ| ಟಿ‌ಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ “ರಿಯಲ್ಟಿ ಎಕ್ಸ್‌ಪೊ – 2013″ ಜರಗಲಿದೆ ಎಂದು ತಿಳಿಸಿದರು.

ಪುಷ್ಪರಾಜ್ ಜೈನ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ , ಸರಕಾರದ ‘ಕೈಗೆಟಕುವ ದರದಲ್ಲಿ ಆಶ್ರಯ’ ಎಂಬ ಧೋರಣೆಗೆ ಪೂರಕವಾಗಿ ಕ್ರೆಡಾಯಿ ಈ ಕಾರ್ಯಕ್ರಮ ಆಯೋಜಿಸಿದೆ. ಗೃಹಸಾಲ ವಿತರಿಸುವ ಮುಂಚೂಣಿಯ ಬ್ಯಾಂಕ್‌ಗಳು ಕೂಡ ಭಾಗವಹಿಸುತ್ತಿವೆ. ಕ್ರೆಡಾಯಿ ಸದಸ್ಯರು ತಮ್ಮ ಅಪಾರ್ಟ್‌ಮೆಂಟ್‌ಗಳ ದರಗಳನ್ನು ಕಡಿತಗೊಳಿಸಿ ಮಾರಾಟ – ಪ್ರಚಾರ ಮಾಡಲಿದ್ದಾರೆ. ಸ್ಪಾಟ್ ಬುಕಿಂಗ್ ಮಾಡುವ ಗ್ರಾಹಕರಿಗೆ ಪ್ರಥಮ ಬಹುಮಾನ – ಹ್ಯುಂಡೈ ಐ10 ಕಾರು, ದ್ವಿತೀಯ – ಹೋಂಡಾ ಆಕ್ಟಿವಾ, ತೃತೀಯ – 32 ಇಂಚಿನ ಟಿವಿ ಗೆಲ್ಲುವ ಅವಕಾಶವಿದೆ. ಸಾರ್ವಜನಿಕರು ಈ ಪ್ರದರ್ಶನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶ ಸದುಪಯೋಗಿಸಿಕೊಳ್ಳುವಂತೆ ಅವರು ವಿನಂತಿಸಿದರು.

ಕ್ರೆಡಾಯ್ ರಿಯಾಲ್ಟಿ ಎಕ್ಸ್ ಪೊ 2013 ಇದರ ಉದ್ಘಾಟನಾ ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೆರವೇರಿಸಲಿದ್ದಾರೆ. ಬೆಳಗ್ಗೆ 9.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ದೀಪ ಬೆಳಗಿಸಲಿದ್ದಾರೆ. ಆರೋಗ್ಯ ಸಚಿವ ಯು. ಟಿ. ಖಾದರ್, ಮೀನುಗಾರಿಕೆ ಹಾಗೂ ಯುವಜನ ಸಚಿವ ಅಭಯಚಂದ್ರ ಜೈನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಳೀನ್ ಕುಮಾರ್ ಕಟೀಲ್, ಜೆ. ಆರ್. ಲೋಬೊ, ಮೊಯ್ದಿನ್ ಬಾವಾ, ಎಮ್. ಎನ್. ರಾಜೇಂದ್ರ ಕುಮಾರ್, ಗಣೇಶ್ ಕಾರ್ಣಿಕ್, ಮೋನಪ್ಪ ಭಂಢಾರಿ ಗೌರವ ಅತಿಥಿಗಳಾಗಿ ಉಪಸ್ಥಿತರಾಗಲಿದ್ದಾರೆ ಎಂದು ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದರು.

ಈ ಸಂದರ್ಭದಲ್ಲಿ ಎಕ್ಸ್ ಪೊ ಹೋಮ್ ಫಾರ್ ಆಲ್ ಎಂಬ ಧ್ಯೇಯ ಹೊಂದಿರುವ ಜಿಲ್ಲೆಯ ಮತ್ತು ರಾಜ್ಯದ ವಿವಿಧ ಹೆಸರಾಂತ ಬಿಲ್ಡರ್ ಗಳು ಈ ರಿಯಾಲ್ಟಿ ಎಕ್ಸ್ ಪೊದಲ್ಲಿ ಪಾಲ್ಗೊಳ್ಳಲಿದ್ದಾರೆ. ಮನೆಸಾಲ ವಿತರಿಸುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಸ್‌ಬಿ‌ಐ, ಕಾರ್ಪ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಂತಹ ಹಲವು ಬ್ಯಾಂಕ್‌ಗಳು ಹಾಗೂ ನಿರ್ಮಾಣ ಸಾಮಗ್ರಿ ಸಂಸ್ಥೆಗಳು ಭಾಗವಹಿಸಲಿವೆ ಎಂದರು.

ಈ ಪತ್ರಿಕಾಗೋಷ್ಟಿಯಲ್ಲಿ ರಿಯಾಲ್ಟಿ ಎಕ್ಸ್ ಪೊ 2013 ಚೇರಮ್ಯಾನ್ ಕೆ. ಸಿ. ನಾಯ್ಕ್, ಕಾರ್ಯದರ್ಶಿ ಗಣೇಶ್ ಬಂಗೇರಾ, ಕೋಶಾಧಿಕಾರಿ ವಿನೋದ್ ಪಿಂಟೊ ಹಾಗೂ ಸಮಿತಿ ಸದಸ್ಯ ಎಸ್. ಎಮ್. ಅರ್ಶಾದ್ ಉಪಸ್ಥಿತರಿದ್ದರು. press-meet-

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English