ಮಂಗಳೂರು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್. ಆರ್ ನಾಯಕ್ ಇಂದು ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯದಲ್ಲಿ ದೂರುದಾರರ ಅಹವಾಲುಗಳನ್ನು ಸ್ವೀಕರಿಸಿದರು.
ಬಲತ್ಕಾರದ ಮದುವೆ, ಭೂ ಹಗರಣ ಹಾಗೂ ಉದ್ಯೋಗದ ಸಮಸ್ಯೆಯ ಮೂರು ಅರ್ಜಿಗಳನ್ನು ಎಸ್.ಆರ್ ನಾಯಕ್ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ್ ನಾನು ಬೆಂಗಳೂರಿನಿಂದ ಇಲ್ಲಿಯವರೆಗೆ ಬಂದು ಕೇವಲ ಮೂರು ಅರ್ಜಿಗಳನ್ನು ಮಾತ್ರ ಸ್ವೀಕರಿಸುವುದು, ದ.ಕ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ, ಸುವ್ಯವಸ್ಥಿತವಾಗಿರುವುದನ್ನು ಸೂಚಿಸುತ್ತಿದೆ ಎಂದರು.
2007 ರಲ್ಲಿ ಸ್ಥಾಪನೆಯಾದ ಮಾನವ ಹಕ್ಕುಗಳ ಆಯೋಗ ಸವಲತ್ತುಗಳಿಲ್ಲದೆ ದೂರುದಾರರ ಅರ್ಜಿಗಳನ್ನು 2 ತಿಂಗಳಾದರೂ ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. 2007 ರಿಂದ ಇದುವರೆಗೆ 23 ಸಾವಿರ ದೂರುಗಳು ದಾಖಲಾಗಿದ್ದು, 5 ಸಾವಿರ ದೂರುಗಳು ಅಯೋಗದ ವತಿಯಿಂದ ಸ್ವಯಂಪ್ರೇರಿತವಾಗಿ ದಾಖಲು ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳವರೆಗೆ 952 ದೂರುಗಳು ದಾಖಲಾಗಿದೆ. ಒಟ್ಟು ದೂರುಗಳಲ್ಲಿ 12 ಕ್ಕಿಂತಲೂ ಹೆಚ್ಚು ದೂರುಗಳು ತಿರ್ಮಾನಗೊಂಡಿದೆ. ಎಂದು ಎಸ್.ಆರ್ ನಾಯಕ್ ಹೇಳಿದರು.
ಆಯೋಗದ ಸಿಬ್ಬಂದಿಗಳ ಹೆಚ್ಚಳಕ್ಕಾಗಿ ಸರಕಾರಕ್ಕೆ ಮನವಿ ಮಾಡಲಾಗಿದ್ದರೂ ಇದುವರೆಗೆ 105 ಸಿಬ್ಬಂದಿಗಳನ್ನು ಮಾತ್ರವೇ ನೇಮಕ ಮಾಡಲಾಗಿದೆ. ಇನ್ನೂ 389 ಹುದ್ದೆಗಳ ಅವಶ್ಯಕತೆ ಇದೆ. ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಆಯೋಗದ ಒಂದೊಂದು ಘಟಕ ಸ್ಥಾಪನೆಗೆ ಮನವಿ ಮಾಡಲಾಗಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ ಎಂದರು.
ಸಂಸ್ಥೆಯನ್ನು ಹುಟ್ಟು ಹಾಕಿಸಿದ ಮಾತ್ರಕ್ಕೆ ಯೋಜನೆಗಳು ಪೂರ್ತಿಯಾಗುವುದಿಲ್ಲ, ಅವುಗಳಿಗೆ ಬೇಕಾದ ಸವಲತ್ತುಗಳನ್ನು ಪೂರೈಸಬೇಕು ಎಂದು ನಾಯಕ್ ಪತ್ರಕರ್ತರಿಗೆ ಹೇಳಿದರು.
Click this button or press Ctrl+G to toggle between Kannada and English