ಗಾಂಧೀಜಿ ಕಂಡ ಪಾನಮುಕ್ತ ಭಾರತದ ಕನಸನ್ನು ಸಕಾರಗೊಳಿಸೋಣ : ಮೊಯ್ದಿನ್ ಬಾವ

2:04 PM, Wednesday, October 2nd, 2013
Share
1 Star2 Stars3 Stars4 Stars5 Stars
(No Ratings Yet)
Loading...

vidhyabhavana

ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ರಿ, ಮಂಗಳೂರು ತಾಲೂಕು ಜನಜಾಗೃತಿ ವೇದಿಕೆ ಮಂಗಳೂರು ನಗರ ಮತ್ತು ಗ್ರಾಮಂತರ ಇವರ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಪಾನಮುಕ್ತಬಂಧು ಕುಟುಂಬಗಳ ಸಮಾವೇಶ ” ಉಚಿತ ವೈದ್ಯಕೀಯ ಶಿಬಿರ ಹಾಗೂ ಸಾಂಸ್ಕೃತಿಕ ವೈಭವ”ವು ದಿನಾಂಕ 02-10-2013ರ ಬುಧವಾರ ಭಾರತೀಯ ವಿದ್ಯಾಭವನ, ಪಾಂಡೇಶ್ವರ ಎ.ಬಿ.ಶೆಟ್ಟಿ ಸರ್ಕಲ್ ಹತ್ತಿರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ಆರ್. ಪ್ರಶಾಂತ್ ಕೆ.ಎ.ಎಸ್. ಸಹಾಯಕ ಆಯುಕ್ತರು ಮಂಗಳೂರು , ಉಪವಿಭಾಗ ಇವರು ನೇರವೇರಿಸಿದರು.

ವಿಶೇಷ ಆಹ್ವಾನಿತರಾದ ಮಂಗಳೂರು ಉತ್ತರ ವಿಧಾನ ಸಭಾ ಶಾಸಕರಾದ ಮೊಯ್ದಿನ್ ಬಾವ ಮಾತನಾಡಿ ಮನುಷ್ಯ ದುಶ್ಟಟಗಳಿಂದ ಆರೋಗ್ಯ, ಮನೆ, ಮರ್ಯಾದೆ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಗಾಂಧೀಜಿಯವರು ಅಹಿಂಸೆಯಿಂದ ಎಲ್ಲವನ್ನು ಸಕಾರಗೊಳಿಸಿದರು. ಪಾನಮುಕ್ತ ಭಾರತದ ಕನಸುಕಂಡ ಅವರು, ಅದಕ್ಕಾಗಿ ಹೋರಾಡಿದರು. ಅವರ ಜನ್ಮ ಜಯಂತಿಯಂದು ನಾವು ಮಾಡುವ ಈ ಕೆಲಸ ನಿಜಕ್ಕೂ ಮಹತ್ವ ಪಡೆದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸದಾಶಿವ ಶೆಟ್ಟಿ ಅಧ್ಯಕ್ಷರು, ಜನಜಾಗೃತಿ ವೇದಿಕೆ ಮಂಗಳೂರು ಇವರು ವಹಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಟಿ. ಸಂಪತ್ ಕುಮಾರ್ ಪ್ರಗತಿನಿಧಿ ನಿರ್ದೆಶಕರು, ಶ್ರೀ ಕ್ಷೇ. ಧ. ಗ್ರಾ. ಯೋಜನೆ.ರಿ. ಧರ್ಮಸ್ಥಳ, ಶ್ರೀ ಪ್ರಶಾಂತ್ ಗಟ್ಟಿ ಅಧ್ಯಕ್ಷರು, ಜನಜಾಗೃತಿ ವೇದಿಕೆ, ಮಂಗಳೂರು ಗ್ರಾಮಾಂತರ, ರಾಘವ.ಯಂ ಯೋಜನಾಧಿಕಾರಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ.ರಿ., ಮಂಗಳೂರು. ಹಾಗೂ ಸದಾಶಿವ ಶೆಟ್ಟಿ ಅಧ್ಯಕ್ಷರು/ಪದಾಧಿಕಾರಿಗಳು ಜನಜಾಗೃತಿ ವೇದಿಕೆ ಮಂಗಳೂರು ಉಪಸ್ಥಿತರಿದ್ದರು.

ಸಮಾರಂಭ ಕಾರ್ಯಕ್ರಮದ ಮೊದಲು ಬೆಳಿಗ್ಗೆ 9.15 ಕ್ಕೆ ಫಳ್ನೀರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಛೇರಿಯಿಂದ ಪಾಂಡೇಶ್ವರ ಭಾರತೀಯ ವಿದ್ಯಾಭವನದ ತನಕ ದುಶ್ಟಟಹ ವಿರುದ್ಧ ಬೃಹತ್ ವಾಹನ ಜಾಥಾ ನಡೆಯಿತು.

vidhyabhavana

vidhyabhavana

vidhyabhavana

vidhyabhavana

vidhyabhavana

vidhyabhavana

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English