ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ( ಅ. 2) ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು.
ಮಾಜಿ ಸಚಿವ ಬಿಎ.ಮೊಯ್ದಿನ್ ಮಾತನಾಡಿ ಯುವಕರಿಗೆ ಗಾಂಧೀಜಿ ತತ್ವಗಳನ್ನು ತಿಳಿಸುವುದರ ಮೂಲಕ ದೇಶ ಪ್ರೇಮವನ್ನು ಬೆಳೆಸಬೇಕು. ಯುವಕರಲ್ಲಿ ಸಹನಾಶೀಲತೆ ಸೃಷ್ಟಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ. ಸ್ವದೇಶಿ ಕಾರ್ಯಕ್ರಮದ ಆಂದೋಲನದ ಮೂಲಕ ಅಹಿಂಸೆಯನ್ನು ಭೋಧಿಸಿದ್ದರೂ ಹಾಗಾಗಿ ಗಾಂಧಿ ತತ್ವಗಳು ಇಂದಿಗೂ ಅಮರವಾಗಿದೆ ಎಂದು ಅವರು ಹೇಳಿದರು.
ಗಾಂಧಿ ಬ್ರಿಟಿಷರ ವಿರುದ್ದ ಅಹಿಂಸಾ ಮಾರ್ಗದಿಂದಲೇ ಹೋರಾಟ ಮಾಡಿದ್ದರು. ಹಾಗಾಗಿ ಅವರು ಪ್ರಪಂಚದಾದ್ಯಂತ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಮೊಯ್ದಿನ್ ಬಾವಾ, ಜಿಲ್ಲಾ ಕಾಂಗ್ರಸ್ ಸಮಿತಿಯ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೆ.ಪಿ.ಸಿ.ಸಿನ ಕಾರ್ಯದರ್ಶಿ ಐವನ್ ಡಿ ಸೋಜಾ, ಮಾಜಿ ಸದಸ್ಯ ಪಿ.ಇಬ್ರಾಹಿಂ, ಎಸ್.ಸಿ.ಎಸ್.ಟಿ ಘಟಕದ ಅಧ್ಯಕ್ಷ ಪಧ್ಮನಾಭ ನರಿಂಗಾನ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಬ್ಲಾಕ್ ಸಮಿತಿಯ ಸದಸ್ಯರಾದ ನಾಗೇಂದ್ರ, ನಾರಾಯಣ, ಹಾಗೂ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English