ಮಂಗಳೂರು : ಭಾರತ ಸೇವಾದಳ ದ.ಕ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ಗಾಂಧಿಜಯಂತಿಯನ್ನು ಆಚರಿಸಲಾಯಿತು.
ಭಾರತ ಸೇವಾದಳದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಗಾಂಧೀಜಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧಿ ಕೇವಲ ಭಾರತದ ಪಿತಾಮಹ ಮಾತ್ರವಲ್ಲ, ಅವರು ವಿಶ್ವದ ಪಿತಾಮಹ ಎಂದೆನಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಬ್ಯಾರಿಸ್ಟರ್ ಪದವಿಯನ್ನು ಪಡೆದ ಗಾಂಧೀ ಸ್ವಾತಂತ್ರ್ಯ ಹೋರಾಟದ ನೆಲೆಯಲ್ಲಿ ಯುವಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು. ವೈಯಕ್ತಿಕ ಸಾಧನೆಯ ಜೊತೆಗೆ ನಮ್ಮ ನಾಡಿನ ಅಭಿವೃದ್ದಿ ಮಾಡುವುದನ್ನು ಯುವಜನತೆ ಮರೆಯಬಾರದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೋಸೆಸ್ ಜಯಶೇಖರ್, ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಎಸ್.ಎನ್.ಹೆಗ್ಡೆ , ಪ್ರಕಾಶ್ ಶಿಯಾನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English