ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವ

5:18 PM, Saturday, October 5th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Mangalore-Dasara

ಮಂಗಳೂರು : ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಯನ್ನು ಶನಿವಾರ  ಭಕ್ತ ಸಮೂಹದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಶಾರದ ಮಾತೆಯನ್ನು ವಾದ್ಯ, ಚಂಡೆ, ವಾದಗದೊಂದಿಗೆ ಹುಲಿವೇಷದ ನೃತ್ಯದ ಜೊತೆ ಜೊತೆಯಲ್ಲಿ ಮೆರವಣಿಗೆಯಲ್ಲಿ ದೇವಳಕ್ಕೆ ಸುತ್ತ ಪ್ರದಕ್ಷಿಣಿ ಹಾಕಲಾಯಿತು. ಬಳಿಕ ಸಕಲ ವಿಧಿವಿಧಾನಗಳನ್ನು ಅನುಸರಿಸಿ ಮಾತೆ ಶಾರದ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.

ನಗರದ ಖ್ಯಾತ ಉದ್ಯಮಿ ಶ್ರೀ ರಮೇಶ್ ಕುಮಾರ್ ಹಾಗೂ ಶ್ರೀಮತಿ ಉರ್ಮಿಳಾ ರಮೇಶ್ ಅವರು ಪ್ರತಿಷ್ಠಾಪನಾ ದೀಪಾ ಬೆಳಗಿಸಿದರು.Mangalore-Dasaraನವೀಕರಣ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ ಅವರು, ಈ ಸಂದರ್ಭದಲ್ಲಿ ಮಾತನಾಡಿ 101 ವರ್ಷಗಳ ಇತಿಹಾಸವಿರುವ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಮಾನವ ಕುಲವನ್ನು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಮಂಗಳೂರು ದಸರಾ ಎಂದೇ ಪ್ರಸಿದ್ಧಿಯಾಗಿರುವ ಈ ಉತ್ಸವವು, ಇಂದಿನಿಂದ ಹತ್ತು ದಿನಗಳ ಕಾಲ ನಡೆಯಲಿದ್ದು , 23ವರ್ಷಗಳಿಂದ ನವೀಕರಣ ಕಾರ್ಯದ ರೂವಾರಿ ಬಿ. ಜನಾರ್ಧನ ಪೂಜಾರಿ ನೇತೃತ್ವದಲ್ಲಿ ನವರಾತ್ರಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ.ಅಲ್ಲದೇ ಈ ಬಾರಿ ಅ.6ರಿಂದ ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳಾ ಅರ್ಚಕಿಯರು ಕ್ಷೇತ್ರದಲ್ಲಿ ಪೂಜೆ ಮಾಡಲಿದ್ದು, ಇದೊಂದು ಬದಲಾವಣೆ ಪರ್ವಕ್ಕೆ ನಾಂದಿ ಹಾಡಿದಂತೆ ಎಂದರು.

ನವೀಕರಣ ಸಮಿತಿ ಸದಸ್ಯರಾದ ಡಾ. ಬಿಜಿ.ಸುವರ್ಣ, ಶ್ರೀ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ .ಆರ್, ಶ್ರೀ ಜಯ ಸಿ ಸುವರ್ಣ, ದೇವೇಂದ್ರ ಪೂಜಾರಿ, ಬಿ.ದೇವದಾಸ್, ರವಿಶಂಕರ್ ಮಿಜಾರು ಪದಾಧಿಕಾರಿಗಳಾದ ಮಾದವ ಸುವರ್ಣ,ಬಿ.ಕೆ.ತಾರನಾಥ್, ಕೆ.ಮಹೇಶ್ಚಂದ್ರ,ಎನ್.ಹರಿಶ್ಚಂದ್ರ, ರಾಧಾಕೃಷ್ಣ ಹಾಗೂ ಮುಂತಾದವರು ಉಪಸ್ಥಿತರಿದ್ದರು.Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

Mangalore-Dasara

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English