ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆ

9:59 PM, Tuesday, November 23rd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆಮಂಗಳೂರು: ಎಸ್.ಕೆ. ಬೀಡಿ ವರ್ಕರ್ಸ್ ಫೇಡರೇಶನ್ (ಎಐಟಿಯುಸಿ) ಇದರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕಾರ್ಮಿಕ ಭವಿಷ್ಯ ನಿಧಿ  ಕಛೇರಿ ಎದುರು ಮಾಸಿಕ ಪಿಂಚಣಿ ರೂ. 1500 ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ ನಡೆಯಿತು.

ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆಬಡ ಅಸಂಘಟಿತ ವಲಯದ ಕಾರ್ಮಿಕರಿಗೆ ಇಂದು ಹಲವಾರು ಯೋಜನೆ ಕಾಯ್ದೆಗಳು ರೂಪಿಸ್ಪಟ್ಟರೂ ಕಾರ್ಯಗತಗೊಂಡಿಲ್ಲ. ಶಾಸಕರು, ಸಂಸದರು, ಅಧಿಕಾರಿಗಳಿಗೆ ಕೈ ತುಂಬಾ ಸಂಬಳ, ಪಿಂಚಣಿ ಆದರೆ ಬಡ ಅಸಂಘಟಿತ ಬೀಡಿ ಕಾರ್ಮಿಕರಿಗೆ ತಿಂಗಳಿಗೆ ಸರಾಸರಿ ರೂ.50/- ಪಿಂಚಣಿ….! ತಿಂಗಳಿಗೊಮ್ಮೆ ಬ್ಯಾಂಕಿಗೆ ಹೋಗಿ ಬರಲು ಬಸ್ ಪ್ರಯಾಣವೇ ಇದಕ್ಕಿಂತ ದುಬಾರಿ, ಕಾರ್ಮಿಕ ಪಿಂಚಣಿ ಯೋಜನೆ 1995 ರ ಅಡಿಯಲ್ಲಿ ಈ ಅವ್ಯವಸ್ಥೆ ಇದ್ದು ಅಧಿಕಾರಿಗಳು ಕಂಡೂ ಕುರುಡರಾಗಿದ್ದಾರೆ. ಎಂದು ಎಂ. ಎಸ್. ವಿ ಅನಂತ ಸುಬ್ಬರಾವ್ ಹೇಳಿದರು.

ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆ16-11-1995ರ ನಂತರ ಕೆಲಸಕ್ಕೆ ಸೇರಿ ಇತ್ತೀಚೆಗೆ ನಿವೃತ್ತರಾಗಿರುವ ಬೀಡಿ ಕಾರ್ಮಿಕರಿಗೆ ಲಭಿಸುತ್ತಿರುವ ಪಿಂಚಣಿ ಕೆಲವರಿಗೆ ಕೇವಲ ರೂ. 20 ಕ್ಕಿಂತ ಕಡಿಮೆ. ಒಟ್ಟು ಸೇವಾವಧಿ, ನಿವೃತ್ತಿಯ ಹಿಂದಿನ ವರ್ಷದ ಸಂಬಳವನ್ನು ಗಣನೆಗೆ ತೆಗೆದು ಪಿಂಚಣಿ ದರ ನಿಗದಿ ಪಡಿಸಲಾಗುತ್ತದೆ. ಆದರೆ ನಿವೃತ್ತಿ ವರ್ಷದಲ್ಲಿ ಬೀಡಿ ಕಾಮರ್ಿಕರ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವುದರಿಂದ ಸಹಜವಾಗಿ ಸಂಬಳ ಕಡಿಮೆಯಾಗುತ್ತಿದ್ದು, ಪಿಂಚಣಿ ದರ ಕಡಿಮೆಯಾಗುತ್ತಿದೆ. ಬೀಡಿ ಕಾಮರ್ಿಕರಿಗೆ ಕನಿಷ್ಠ ಪಿಂಚಣಿ ನಿಗದಿ ಪಡಿಸಬೇಕೆಂದು ನಮ್ಮ ಒತ್ತಾಯ ಇಲಾಖೆಗೆ ಕೇಳಿಸುತಿಲ್ಲ. ಆದುದರಿಂದ, ಯೋಜನೆಗೆ ತಿದ್ದುಪಡಿ ತಂದು ಕನಿಷ್ಠ ರೂ. 1500 ಮಾಸಿಕ ಪಿಂಚಣಿ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು.

ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆಪಿಂಚಣಿದಾರರು ಮರಣಹೊಂದಿದ ನಂತರ ಬಂಡವಾಳ ಪರುಪಾವತಿ ಮೊತ್ತ ಪಡೆಯುವ ಅವಕಾಶ ಮೊದಲು ಪಿಂಚಣಿದಾರರಿಗೆ ಒದಗಿಸಲಾಗಿತ್ತು. ಆದರೆ ಭವಿಷ್ಯ ನಿಧಿ ಸಂಘಟನೆ ಈ ಅವಕಾಶಗಳನ್ನು ಚಚರ್ಿಸದೆ, ಏಕಾಏಕಿ ನಿಲ್ಲಿಸಿ, ಕಾರ್ಮಿಕರಿಂದ ಕಸಿದುಕೊಂಡಿದೆ. ಇದು ತೀರಾ ಅನ್ಯಾಯವಾಗಿದ್ದು ಕಾರ್ಮಿಕರನ್ನು ಜಾಡಿಸಿ ರಸ್ತೆಗೆ ಬಿಸಾಡಿದಂತಾಗಿದೆ. ಅಂದರೆ ದೇಣಿಗೆ ಪಾವತಿಸಿ ಭವಿಷ್ಯ ನಿಧಿ ಸದಸ್ಯರಾಗುವ ಬೀಡಿ ಕಾರ್ಮಿಕರಿಗೆ ಭವಿಷ್ಯ ನಿಧಿ ಸಂಘಟನೆ ನಿವೃತ್ತಿ ಕಾಲದಲ್ಲಿ ನೀಡುವ ಕೊಡುಗೆ ಏನು ಗೊತ್ತೇ? ಮಾಸಿಕ ರೂ 50 ಕ್ಕಿಂತಲೂ ಕಡಿಮೆ ಪಿಂಚಣಿ ಮಾತ್ರ ಬೇರೇನಿಲ್ಲ! ಆದುದರಿಂದ ಬೀಡಿ ಕಾರ್ಮಿಕರೆಲ್ಲರಿಗೂ ಕನಿಷ್ಠ ರೂ. 1500 ಮಾಸಿಕ ಪಿಂಚಣಿ ನೀಡುವುದಲ್ಲದೆ ಪರಿವರ್ತಿತ ಪಿಂಚಣಿ ಮತ್ತು ಬಂಡವಾಳ ಮರುಪಾವತಿಯ ಅವಕಾಶವನ್ನು ಮತ್ತೆ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದರು.
ಎಸ್. ಚಂದಪ್ಪ ಅಂಚನ್, ಅಧ್ಯಕ್ಷರು, ಎಂ. ಕರುಣಾಕರ್, ಕೋಶಾಧಿಕಾರಿ, ಪಿ. ಬಸವರಾಜ್, ಪಿ. ಸಂಜೀವ, ಕುಕ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ವಿ. ಎಸ್ ಬೇರಿಂಜೆ ಸ್ವಾಗತಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English