ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಪೂಜೆ ನೆರೆವೇರಿಸದ ಮಹಿಳಾ ಅರ್ಚಕರು

12:20 AM, Monday, October 7th, 2013
Share
1 Star2 Stars3 Stars4 Stars5 Stars
(5 rating, 4 votes)
Loading...
widows pooja ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಇಬ್ಬರು ವಿಧವೆಯರಿಂದ ಕುದ್ರೋಳಿ ಕ್ಷೇತ್ರದಲ್ಲಿ  ಪೂಜೆ ಮಾಡಿಸುವುದರೊಂದಿಗೆ ಅರ್ಚಕರನ್ನಾಗಿ ನೇಮಕ ಮಾಡಿಸಿದರು.

ಮಹಿಳೆಯರಾದ ಇಂದಿರಾ ಶಾಂತಿ(ಬಂಟ್ವಾಳ ಮೂಡ ಬಿ.ಸಿ.ರೋಡ್ ನವರು) ಲಕ್ಷ್ಮೀ ಶಾಂತಿ(ಪುತ್ತೂರಿನ ಬನ್ನೂರು ಗ್ರಾಮದವರು) ಇವರನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದೊಳಕ್ಕೆ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು.

ಕುದ್ರೋಳಿ ಕ್ಷೇತ್ರದಲ್ಲಿರುವ  ನಾರಾಯಣಗುರು ಮೂರ್ತಿಗೆ, ಶನೀಶ್ವರ, ಮಹಾಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಗೋಕರ್ಣನಾಥ ದೇವರ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸುವುದರೊಂದಿಗೆ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಶ್ವತ್ಥಮರದ ಕೆಳಗೆ ನೂತನವಾಗಿ ಸ್ಥಾಪಿಸಲ್ಪಟ್ಟ ದತ್ತಾತ್ರೇಯ ಮೂರ್ತಿಯ ಉದ್ಘಾಟನೆಯನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು. ಶ್ರೀ ಶಾರದಾ ಮಾತೆ, ಶ್ರೀ ಗಣಪತಿ ಹಾಗು ನವದುರ್ಗೆಯರ ಪೂಜೆಯನ್ನು ಮಹಿಳಾ ಅರ್ಚಕರು ನೆರವೇರಿಸಿದರು.  ಬಳಿಕ ಪ್ರಸಾದ ವಿತರಿಸಲಾಯಿತು.

widows pooja ಈ ಸಂದರ್ಭದಲ್ಲಿ ಸುದ್ಧಿಗಾರರಲ್ಲಿ ಮಾತನಾಡಿದ  ಬಿ. ಜನಾರ್ದನ ಪೂಜಾರಿ ಅವರು, ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕು ಕಲ್ಪಿಸುವ ಸದುದ್ದೇಶದಿಂದ ಬ್ರಹ್ಮಶ್ರೀ ನಾರಾಯಣಗುರು ಅವರ ತತ್ವದಂತೆ ಈ ಅವಕಾಶ ಮಾಡಿಕೊಡಲಾಗಿದೆ. ದೇಶದಲ್ಲಿ ಮಹಿಳೆಯ ಮೇಲಾಗುತ್ತಿರುವ ದಬ್ಬಾಳಿಕೆ ಅನಾಚಾರಗಳಿಗೆ ಕಡಿವಾಣ ಹಾಕುವ ಸಲುವಾಗಿ ಈ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮದುವೆಯಾಗಿ ಗಂಡ ಕಳೆದುಕೊಂಡ ಮಾತ್ರಕ್ಕೆ ಅವರೆಲ್ಲ ವಿಧವೆಯರಲ್ಲ. ಗಂಡ ಇರುವಾಗ ಸುಮಂಗಲಿ, ಸತ್ತಮೇಲೆ ಅವರನ್ನು ನೋಡಿದರೆ ಅಪಶಕುನ, ಆಕೆ ಯಾವುದೇ ದೇವತಕಾರ್ಯಗಳಲ್ಲಿ ಪಾಲ್ಗೊಳ್ಳಬಾರದು, ಸ್ವಂತ ಮಕ್ಕಳ ಮದುವೆ ಕಾರ್ಯದಿಂದಲೂ ಆಕೆಯನ್ನು ಅನಿಷ್ಟವೆಂದು ಹಣೆಪಟ್ಟಿ ತೊಡೆಸಿ ಆಕೆಯನ್ನು ಸಮಾಜದಿಂದ ದೂರವಿಡುತ್ತಾರೆ.ಹಿಂದೆ ಗಂಡ ತೀರಿಹೋದ ಬಳಿಕ ಅದೇ ಚಿತೆಗೆ ಪತ್ನಿಯು ಹಾರಿ ಸಜೀವ ದಹನಮಾಡುವ ಅನಿಷ್ಟ ಪದ್ದತಿ ಇತ್ತು, ಇಂದು ಶ್ರೀ ನಾರಾಯಣ ಗುರುಗಳ ತತ್ವದಂತೆ ಆ ಅನಿಷ್ಟ ಪದ್ದತಿಗಳನ್ನು ಹೊರದೋಡಿಸುವ ಕಾರ್ಯ ದೇವಳದಲ್ಲಿ ನಡೆದಿದೆ ಎಂದು ಹೇಳಿದರು.

ಈ ಅರ್ಚಕಿಯರಿಗೆ 4ತಿಂಗಳುಗಳ ಕಾಲ ತರಬೇತಿ ನೀಡಲಾಗಿದ್ದು, ದೇವಸ್ಥಾನದ ಒಳಗೆ ಸಮವಸ್ತ್ರ ನೀಡಲಾಗಿದೆ. ಯಾವುದೇ ಸಮಯದಲ್ಲಿ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇನ್ನು ಮುಂಬರುವ ದಿನಗಳಲ್ಲಿ ಯಾವುದೇ ಜಾತಿಯ ಮಹಿಳೆ ಪೂಜೆ ಮಾಡಲು ಇಚ್ಚಿಸಿದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

widows pooja ಇದೇ ಸಂದರ್ಭದಲ್ಲಿಕೃಪಾ ಆಳ್ವ ಅವರು ಮಾತನಾಡಿ, ಈ ಪದ್ದತಿಯೊಂದು ಸಾಮಾಜಿಕ ಕ್ರಾಂತಿಯಾಗಿದೆ. ದೇವರಿಗೆ ಬೇಕಾಗಿರುವುದು ಶೃದ್ದಾಭಕ್ತಿ. ಇಂದು ಗಂಡಸರಿಗಿಂತ ಹೆಂಗಸರಿಗೆ ಜಾಸ್ತಿನೇ ಶೃದ್ದಾ ಭಕ್ತಿ‌ ಇರುವುದು ಹಾಗೂ ಇದು ನನ್ನ ವೈಯಕ್ತಿಕ ಅಭಿಪ್ರಾಯ ಕೂಡ ಆಗಿದೆ ಎಂದು ತಿಳಿಸಿದರು.

ಮುಂಬಾಯಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ, ಶ್ರೀ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್. ಆರ್, ಹರಿಕೃಷ್ಣ ಬಂಟ್ವಾಳ್, ಡಾ. ಬಿಜಿ ಸುವರ್ಣ, ಕಳ್ಳಿಗೆ ತಾರನಾಥ ಶೆಟ್ಟಿ, ಮಾಧವ ಸುವರ್ಣ, ಬಿ.ಕೆ.ತಾರನಾಥ, ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಶಾಸಕ ಮೊಯ್ದಿನ್ ಬಾವಾ, ಕಾರ್ಪೋರೇಟರ್  ದೀಪಕ್ ಪೂಜಾರಿ, ರತಿಕಲಾ,ಕವಿತ, ಅರುಣ್ ಕೊಯಲೊ ಹಾಗೂ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English