ಕಾವು ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಶಾಸಕ ಜೆ.ಆರ್.ಲೋಬೊ ಗುದ್ದಲಿ ಪೂಜೆ ಕಾರ್ಯಕ್ರಮ

3:17 PM, Tuesday, October 8th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

J.R.Loboಮಂಗಳೂರು: ನಗರದ ಬಜಾಲ್ ಸಮೀಪದ ಕುಂಟಾಲ್ ಗುಡ್ಡೆಗೆ ತೆರಳುವ ರಸ್ತೆ ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಕಾವು ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು.

ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಗೆ ಗುದ್ದಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಬಜಾಲ್ ಪ್ರದೆಶವು ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿದ್ದರೂ ಕೂಡ ಗ್ರಾಮೀಣ ಪ್ರದೇಶಗಳಂತೆಯೇ ಇದೆ. ಹಾಗಾಗಿ ಈ ಪ್ರದೇಶವು ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕಾಣಬೇಕಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರದೇಶಗಳ ಅಭಿವೃದ್ದಿಗೆ ಗಮನ ಹರಿಸಲಾಗುವುದು ಹಾಗೂ ಸಾರ್ವಜನಿಕರೂ ಕೂಡ ಆಡಳಿತ ವ್ಯವಸ್ಥೆಯ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಪ್ರವೀನ್ ಚಂದ್ರ ಆಳ್ವ, ಮಾಜಿ ಮೇಯರ್ ಸೇಸಮ್ಮ, ಶಶಿಧರ್ ಬಜಾಲ್, ಟಿ,ಕೆ,ಸುಧೀರ್, ಭರತ್ ರಾಮ್, ಕೃತಿನ್ ಕುಮಾರ್, ಉಮೇಶ್ ದೇವಾಡಿಗ, ಗೋಪಾಲ್ ಶೆಟ್ಟಿ, ಗಿರೀಶ್ ಶೆಟ್ಟಿ, ನವೀನ್ ಲೋಬೊ, ವಿಲ್ಫಿ ಮೊಂತೆರೊ, ರೋನಿ ನಾಗುರಿ, ಜೋಡಿಸಿಲ್ವ, ಜಯ ಕೆ., ವಿಕ್ಟರ್, ರವಿ ಕುಂಟಾಲ್ ಗುಡ್ಡ, ಸುರೇಶ್ ಮಾಸ್ಟರ್, ಅಧಿಕಾರಿಗಳಾದ ಎ.ಡಬ್ಲ್ಯು. ಲಿಂಗೇ ಗೌಡ, ಮೆಸ್ಕಾಂನ ಗಣಪತಿ, ವಿಶ್ವಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English