ಉಡುಪಿ: ಉಡುಪಿ ಮಾಜಿ ಶಾಸಕ ರಘುಪತಿ ಭಟ್ ನಿನ್ನೆ ಎರಡನೇ ಮದುವೆಯಾಗುವುದರ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಘುಪತಿ ಭಟ್ ಅವರ ಮೊದಲ ಪತ್ನಿ ಪದ್ಮಪ್ರಿಯ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದರಿಂದ ದಾಂಪತ್ಯ ಜೀವನವನ್ನು ಮಿಸ್ ಮಾಡಿ ಕೊಂಡಿದ್ದ ರಘುಪತಿ ಭಟ್ ಇದೀಗ ಶಿಲ್ಪಾ ಶಾಸ್ತ್ರಿ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ.
ಪದ್ಮಪ್ರಿಯ 2008ರಲ್ಲಿ ದೆಹಲಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಆತ್ಮಹತ್ಯೆಯಿಂದಾಗಿ ಅನೇಕ ಅನುಮಾನದ ಹುತ್ತಗಳು ಬೆಳೆದಿ ದ್ದವು. ಹೀಗಾಗಿ ಇಷ್ಟು ದಿನ ಸೈಲೆಂಟ್ ಆಗಿದ್ದ ರಘುಪತಿ ಭಟ್ 5 ವರ್ಷಗಳ ನಂತರದ ಮರು ಮದುವೆಯಾ ಗಿದ್ದಾರೆ. ಶಿಲ್ಪಾಗೂ ಇದು ಎರಡನೆಯ ಮದುವೆಯಾಗಿದ್ದು, ಶಿಲ್ಪಾ ಮೊದಲ ಪತಿಗೆ ಡೈವೋರ್ಸ್ ನೀಡಿದ್ದಾರೆ. ರಘುಪತಿ ಭಟ್ ಮತ್ತು ಶಿಲ್ಪಾ ಮನೆ ಯವರ ಸಮ್ಮತಿಯ ಮೇರೆಗೆ ಈ ಮದುವೆ ನಡೆದಿದೆ ಎಂದು ಹೇಳಲಾಗಿ ದ್ದು, ಈ ಮದುವೆಗೆ ರಘುಪತಿ ಭಟ್ ಅವರ ಇಬ್ಬರು ಮಕ್ಕಳೂ ಕೂಡ ಸಮ್ಮತಿ ನೀಡಿದ್ದಾರೆ ಎನ್ನಲಾಗುತ್ತಿದೆ.
Click this button or press Ctrl+G to toggle between Kannada and English