ಮನುಕುಲವೇ ಕೊಂಡಾಡಬೇಕಾದ ದಾಸ ಸಂತರು ಕನಕದಾಸರು : ಪಾಲೇಮಾರ್

2:43 PM, Wednesday, November 24th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಕನಕದಾಸ ಜಯಂತಿಮಂಗಳೂರು: ಜಿಲ್ಲಾಡಳಿತ ದ.ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ ಕರಾವಳಿ ಕುರುಬರ ಸಂಘ, ಮಂಗಳೂರು ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ ದಾಸವರೇಣ್ಯ, ದಾರ್ಶನಿಕ ಕವಿ, ಸಂತ ಶ್ರೇಷ್ಠ ಕನಕದಾಸ ಜಯಂತಿಯು ಪುರಭವನದಲ್ಲಿ ನಡೆಯಿತು.

ಕನಕದಾಸ ಜಯಂತಿಕನಕದಾಸರ ಭಾವಚಿತ್ರ ಮೆರವಣಿಗೆಯನ್ನು ಶ್ರೀಮತಿ ರಜನಿ ದುಗ್ಗಣ್ಣ, ಮಂಗಳೂರು ಮಹಾನಗರ ಪಾಲಿಕೆ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ  ಮೆರವಣಿಗೆಯು ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಟು, ಗಣಪತಿ ಹೈಸ್ಕೂಲ್ ಮಾರ್ಗವಾಗಿ, ಪುರಭವನಕ್ಕೆ ತಲುಪಿತು.

ಕನಕದಾಸ ಜಯಂತಿಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಕೃಷ್ಣ ಜೆ. ಪಾಲೇಮಾರ್, ದ,ಕ ಜಿಲ್ಲಾ ಉಸ್ತುವಾರಿ ಸಚಿವರು, ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಮನುಕುಲವೇ ಕೊಂಡಾಡಬೇಕಾದ ದಾಸ ಸಂತರು ಕನಕದಾಸರು. ಕುರುಬರಿಗೆ ಮಾತ್ರೆವಲ್ಲದೇ ಎಲ್ಲಾ ಧರ್ಮದವರಿಗೂ ಇವರು ಶ್ರೇಷ್ಠರು, ಅವರ ಜೀವನದ ಆದರ್ಶಗಳನ್ನು ನಾವು ಅನುಸರಿಸಬೇಕು, ಅವರು ತನ್ನ ಕೀರ್ತನೆಗಳಿಂದ ದೇವರನ್ನು ಒಲಿಸಿದವರು, ಅಂತಹ ಒಬ್ಬ ಮಹಾನ್ ಪುರುಷನ ಆದರ್ಶಗಳನ್ನು ಮೆಚ್ಚಬೇಕು. ಕುಲ, ಕುಲ ಎಂದು ಹೊಡೆದಾಡಬೇಡಿ ಎಂದು ಅವರು ಹೇಳಿದರು.

ಕನಕದಾಸ ಜಯಂತಿಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಎನ್. ಯೋಗೀಶ್ ಭಟ್, ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮತ್ತು ಅಧ್ಯಕ್ಷರು, ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಬಂಡವಾಳ ಅಭಿವೃದ್ಧಿ ನಿಗಮ ಇವರು ವಹಿಸಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು ಕನಕದಾಸರ ಕೀರ್ತನೆಗಳು ಜೀವನದ ಅನೇಕ ಮೌಲ್ಯಗಳಿಗೆ ಸ್ಫೂರ್ತಿ ನೀಡಿದೆ, ಅವರ ಕೀರ್ತನೆಗಳು ಮನುಕುಲಕ್ಕೆ ಮನಃಶಾಂತಿಯನ್ನು ನೀಡಿದೆ ಎಂದರು.

ಕನಕದಾಸ ಜಯಂತಿಮುಖ್ಯ ಅತಿಥೀಗಳಾಗಿ ಸನ್ಮಾನ್ಯ ಶ್ರೀ ಯು.ಟಿ ಖಾದರ್ ಶಾಸಕರು, ಮಂಗಳೂರು ವಿಧಾನ ಸಭಾ ಕ್ಷೇತ್ರ, ಅಬ್ದುಲ್ ರಹಿಮಾನ್, ಅಧ್ಯಕ್ಷರು ಬ್ಯಾರಿ ಸಾಹಿತ್ಯ ಅಕಾಡೆಮಿ, ಸುಭೋದ್ ಯಾದವ್, ಜಿಲ್ಲಾಧಿಕಾರಿ ದ.ಕ, ಪ್ರಸನ್ನ ಕುಮಾರ್, ಸಹಕಾರ್ಯದರ್ಶಿ, ರಾಜ್ಯ ಕುರುಬರ ಸಂಘ, ರವಿ ಕುಮಾರ್, ಕಾರ್ಯದದರ್ಶಿ ಕರಾವಳಿ ಕುರುಬರ ಸಂಘ  , ಡಾ. ಸೋಂದಾ ಭಾಸ್ಕರ್ ಭಟ್ ಮುಖ್ಯಸ್ಥರು ಸಂಸ್ಕೃತ ವಿಭಾಗ, ಶ್ರೀ ದುರ್ಗಾಪರಮೇಶ್ವರಿ ಕಾಲೇಜು, ಕಟೀಲು, ಮೊದಲಾದವರು ಉಪಸ್ಥಿತರಿದ್ದರು.

ಕನಕದಾಸ ಜಯಂತಿಕನಕದಾಸರ ಜೀವನ ಮತ್ತು ಸಾಹಿತ್ಯ ಕುರಿತು, ಡಾ. ಸೋಂದಾ ಭಾಸ್ಕರ್ ಭಟ್ ಮುಖ್ಯಸ್ಥರು ಸಂಸ್ಕೃತ ವಿಭಾಗ, ಶ್ರೀ ದುರ್ಗಾಪರಮೇಶ್ವರಿ ಕಾಲೇಜು, ಕಟೀಲು, ಉಪನ್ಯಾಸ ಮಾಡಿದರು. ಕನಕದಾಸರ ಸಾಹಿತ್ಯ ವೈಭವ ಗಾಯನವನ್ನು ಶ್ರೀ ಜಗದೀಶ ಶಿವಪುರ ಹಾಗೂ ಬಳಗ ನೆರವೇರಿಸಿದರು.

ಕನಕದಾಸ ಜಯಂತಿಮಂಗಳಾ ಎಂ. ನಾಯಕ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ ಇವರು ಸ್ವಾಗತಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English