ಬಂಟ್ವಾಳ : ಬಂಟ್ವಾಳ ಲೊರೆಟ್ಟೋ ಚರ್ಚ್‍ನ ಮೇರಿ ಮಾತಾ ಮೂರ್ತಿಯ ಗಾಜಿನ ಕವಚವನ್ನು ಅಪರಿಚಿತ ದುಷ್ಕರ್ಮಿಗಳು ಸೋಡಾ ಬಾಟಲಿಯಿಂದ ಹೊಡೆದು ಹಾಕಿದ ಘಟನೆ ನಡೆದಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ನಿನ್ನೆ ಚರ್ಚ್ ಎದುರು ಕ್ರೈಸ್ತ ಬಾಂಧವರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
ಬಂಟ್ವಾಳ ತಾಲೂಕಿನ ಲೊರೆಟ್ಟೊ ಚರ್ಚ್‍ನ ಆವರಣ ಗೋಡೆಯಲ್ಲಿರುವ ಮೇರಿ ಮಾತಾ ಮೂರ್ತಿಯ ಗಾಜಿನ ಕವಚವನ್ನು ರಾತ್ರಿ ಯಾರೋ ದುಷ್ಕರ್ಮಿಗಳು ಸೋಡಾ ಬಾಟಲಿಯಿಂದ ಒಡೆದು ಹಾಕಿರುವುದು ಇಲ್ಲಿನ ಧಾರ್ಮಿಕ ಭಾವನೆಗಳಿಗೆ ಕೆಡುಕುಂಟು ಮಾಡುವ ಹುನ್ನಾರವಾಗಿದೆ ಎಂದು ಇವರು ಆರೋಪಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಕ್ರೈಸ್ತ ಬಾಂಧವರು ಜಮಾಯಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪುವ ಮುನ್ಸೂಚನೆ ಕಂಡು ಬಂದ ಕೂಡಲೇ ನಗರಠಾಣಾ ಉಪನಿರೀಕ್ಷಕ ವೆಂಕಟರಮಣ ಗೌಡ ಅವರ ನೇತೃತ್ವದಲ್ಲಿ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಏರ್ಪಾಡು ಮಾಡಲಾಗಿತ್ತು.
ಪ್ರತಿಭಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆಗಮಿಸಿ ದುಷ್ಕರ್ಮಿಗಳನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಸ್ಥಳಕ್ಕೆ ಎಸ್.ಪಿ. ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ರಾಜಶೇಖರ್ ಮಿಸ್ತ್ರಿ ಆಗಮಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವ ಭರವಸೆ ನೀಡಿದರು.
Click this button or press Ctrl+G to toggle between Kannada and English