ಮಂಗಳೂರು : ಸೌಜನ್ಯ ಜನ್ಮ ದಿನದ ಹಿನ್ನೆಲೆಯಲ್ಲಿ ಆಕೆಯ ಸಾವಿಗೆ ನ್ಯಾಯ ಅಗ್ರಹಿಸಿ, ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ ಮತ್ತು ಆಕೆಯ ಕುಟುಂಬಕ್ಕೆ ರೂ.ಐದು ಲಕ್ಷ ಪರಿಹಾರ ನೀಡುವಂತೆ ಅಗ್ರಹಿಸಿ ಸರ್ವಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಕ್ಯಾಂಡಲ್ ಪ್ರತಿಭಟನೆಯು ಶುಕ್ರವಾರ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಸರ್ವಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ್ ಶೆಟ್ಟಿ ಕ್ಯಾಂಡಲ್ ಪ್ರತಿಭಟನೆಯನ್ನು ಉದ್ದೇಶಿಸಿ ಕಾಮುಕರ ದುಷ್ಟತನಕ್ಕೆ ಬಲಿಯಾದ ಸೌಜನ್ಯ ಮರಳಿ ಈ ಭೂಮಿಗೆ ಬರುವುದು ಅಸಾಧ್ಯವಾದರೂ ಕೊಲೆ ಆರೋಪಿ ಗಳಿಗೆ ಶಿಕ್ಷೆ ನೀಡುವ ಮೂಲಕ ಆಕೆಯ ಬದುಕಿಗೆ ಚಿರಶಾಂತಿ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಸೌಜನ್ಯ ಪರವಾಗಿ ವಿವಿಧ ಸಂಘ ಟನೆಗಳು ಬೀದಿಗಿಳಿದು ಹೋರಾಟ ವನ್ನು ನಡೆಸುತ್ತಿದ್ದಾರೆ, ಇದು ಶ್ಲಾಘನೀ ಯವಾದುದು, ಆದರೆ ಸೌಜನ್ಯ ಕೊಲೆ ಪ್ರಕರಣವನ್ನೇ ನೆಪ ಮಾಡಿ ಒಂದು ಧಾರ್ಮಿಕ ಕ್ಷೇತ್ರದ ಬಗ್ಗೆ ಮತ್ತು ಧರ್ಮಾಧಿಕಾರಿಯ ಬಗ್ಗೆ ತುಚ್ಚವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಹೀಗೆ ಒಬ್ಬರ ಮೇಲೆ ಆರೋಪ ಮಾಡಿದಾಗ ನಿಜವಾದ ಆರೋಪಿಗಳು ಮರೆಯಾಗುವ ಸಾಧ್ಯತೆ ಇದೆ ಇದನ್ನು ಹೋರಾಟಗಾರರು ತಿಳಿದುಕೊಳ್ಳ ಬೇಕು ಎಂದು ದಿನಕರ್ ಶೆಟ್ಟಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಯ ನೂರಾರು ಕಾರ್ಯಕರ್ತರು ಕ್ಯಾಂಡಲ್ ಉರಿಸಿ ಪ್ರತಿಭಟನೆ ನಡೆಸಿದರು.
Click this button or press Ctrl+G to toggle between Kannada and English