ಮೋಹನ್ ರಾಣ್ಯ ಎಂಬವರನ್ನು ಹತೈಗೈದ ಆರೋಪಿ ಮೊಹಮ್ಮದ್ ಆಸೀಫ್ ಚಿಕ್ಕಮಗಳೂರು ಬಳಿ ಸೆರೆ

3:38 PM, Saturday, October 19th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

ಮೋಹನ್ ರಾಣ್ಯ

ಮೂಲ್ಕಿ: ಕಿನ್ನಿಗೋಳಿ ಮೂರು ಕಾವೇರಿ ಬಳಿಯ ನಿವಾಸಿ ಮೋಹನ್ ರಾಣ್ಯ ಎಂಬವರನ್ನು ಹತೈಗೈದ ಆರೋ ಪಿಯನ್ನು ಮೂಲ್ಕಿ ಪೊಲೀಸರು ಚಿಕ್ಕಮಗಳೂರು ಬಳಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಬಜ್ಪೆ ನಿವಾಸಿ ಯಾಗಿರುವ ಮೊಹಮ್ಮದ್ ಆಸೀಫ್(26) ಬಂಧಿತ ಆರೋಪಿಯಾಗಿದ್ದಾನೆ.

2009ರ ಸುರತ್ಕಲ್ ಕೋಮುಗಲಭೆಯ ಸಂದರ್ಭ ಕಿನ್ನಿಗೋಳಿ ಮೂರುಕಾವೇ ರಿಯ ಬಳಿ ರಾತ್ರಿ ಮನೆಗೆ ತೆರಳುತ್ತಿದ್ದ ಮೋಹನ್ ರಾಣ್ಯ ಎಂಬವರನ್ನು ಮಾರಕಾಯುಧದಿಂದ ಹೊಡೆದು ಕೊಲೆಗೈಯಲಾಗಿತ್ತು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖ ಲಾಗಿ ತನಿಖೆ ನಡೆಯುತ್ತಿತ್ತು.

ಪರಿಶಿಷ್ಟ ಜಾತಿಯ ಬಡ ಕುಟುಂಬದ ಏಕೈಕ ಆಧಾರಸ್ಥಂಭವಾಗಿದ್ದ ಮೋಹನ್ ರಾಣ್ಯರವರ ಕೊಲೆ ಬಗ್ಗೆ ವ್ಯಾಪಕ ಪ್ರತಿಭಟನೆ ನಡೆದು ಎಲ್ಲಾ ವರ್ಗಗಳಿಂದಲೂ ತನಿಖೆಗೆ ಒತ್ತಾಯಿಸಲಾಗಿತ್ತು.

ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಚಿವ ಅಮರನಾಥ ಶೆಟ್ಟಿ ಅಂದಿನ ಶಾಸಕ ಅಭಯಚಂದ್ರ ಜೈನ್ ಮತ್ತು ಹಲವರು ರಾಣ್ಯರವರ ಮನೆಗೆ ಭೇಟಿ ನೀಡಿ ನೊಂದ ಕುಟುಂಬವನ್ನು ಸಂತೈಸಿದ್ದರು.

ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೂಡೂರು ಇಸುಬು ಬೇರೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಆಸೀಫ್ ಕೊಲೆ ನಡೆಸಿರುವ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಮಾತ್ರವಲ್ಲ ಕೋಮು ದ್ವೇಷ ಹೊಂದಿರುವ ಆರೋಪಿಗಳಿಗೆ ಮೋಹನ್ ರಾಣ್ಯ ಉಟ್ಟಿರುವ ಕೇಸರಿ ಲುಂಗಿಯ ಕಾರಣ ಅವರನ್ನು ಮಾರಕಾಯುಧ ಬಳಸಿ ಕೊಲೆಗೈಯಲಾಗಿತ್ತು ಎಂಬ ವಿಷಯವೂ ಬಹಿರಂಗಗೊಂಡಿತ್ತು. ಈ ನಡುವೆ ಆರೋಪಿ ಆಸೀಫ್ ವಿದೇಶಕ್ಕೆ ಪಲಾಯನಗೈದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈತನ ಬರುವಿಕೆಗಾಗಿ ಕಾಯುತ್ತಿದ್ದರು. ಈತ ವಿದೇಶದಿಂದ ಚಿಕ್ಕಮಗಳೂರಿಗೆ ಬಂದಿರುವ ವಿಷಯ ತಿಳಿದ ಮೂಲ್ಕಿ ನಿರೀಕ್ಷಕರು ತಮ್ಮ ಸಿಬ್ಬಂದಿಯೊಂದಿಗೆ ಚಿಕ್ಕಮಗಳೂರಿಗೆ ತೆರಳಿ ಕೊಪ್ಪ ತಾಲೂಕಿನ ಗಡಿಕಲ್ಲು ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಶುಕ್ರವಾರ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English