ಮಂಗಳೂರು : ಅಂಬಿಕಾರೋಡಿನಿಂದ ತಲಪಾಡಿ ವರೆಗೆ ಕೋಟೆಕಾರು ಗ್ರಾಮ ಸಮಿತಿ ಆಯೋಜಿಸಿದ್ದ ಜೈ ನರೇಂದ್ರ ಮೋದಿ ಬೃಹತ್ ವಾಹನ ಜಾಥಾವನ್ನು ಭಾನುವಾರ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಜೈ ನರೇಂದ್ರ ಮೋದಿ ಬೃಹತ್ ವಾಹನ ಜಾಥಾವನ್ನು ಉದ್ದೇ ಶಿಸಿ ಮಾತನಾಡಿದ ಅವರು ದೇಶವನ್ನು ಕಸಿ ಯಲು ಬಂದ ಮೊಘಲರನ್ನು ಶಿವಾಜಿ ಮಹಾರಾಜ ಒದ್ದೋಡಿಸಿದ್ದರೆ, ಇದೀಗ ದೇಶವನ್ನು ಛಿದ್ರಗೊಳಿಸಲು ಹೊರಟಿ ರುವ ಯುಪಿಎ ಸರಕಾರವನ್ನು ಓಡಿ ಸಲು ಮೋದಿ ಇನ್ನೊಂದು ಶಿವಾಜಿಯ ರೂಪ ತಾಳಿದ್ದಾರೆ ಎಂದು ಹೇಳಿದರು.
ದೇಶದ ಜನರು ಅಭಿವೃದ್ಧಿ ದೃಷ್ಟಿಯಿಂದ ರಾಜ ಕೀಯ ಬದಲಾವಣೆ ಬಯಸಿದ್ದಾರೆ. ವಿಶ್ವದ ಕಣ್ಣು ಗುಜರಾತ್ ಅನ್ನು ನೋಡು ವಂತೆ ಮಾಡಿದ ನರೇಂದ್ರ ಮೋದಿ ಅವರಿಂದ ಮಾತ್ರ ಅಭಿವೃದ್ಧಿಯ ಬದಲಾವಣೆ ಸಾಧ್ಯ ಎಂದರು.
ಅಂಬಿಕಾರೋಡಿನಿಂದ ತಲಪಾಡಿ ವರೆಗೂ 500ಕ್ಕೂ ಅಧಿಕ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳು ಜಾಥಾ ದಲ್ಲಿ ಪಾಲ್ಗೊಂಡವು.
ಈ ಸಂದರ್ಭದಲ್ಲಿ ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಣಿ , ಮಾಜಿ ಶಾಸಕ ಕೆ. ಜಯರಾಮ್ ಶೆಟ್ಟಿ, ಸಂತೋಷ್ ಕುಮಾರ್ ರೈ ಬೋಳಿಯಾರು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ ಹಾಗೂ ಸುಶ್ಮಾ ಜನಾರ್ದನ್, ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English