ಪೊಲೀಸ್ ಹುತಾತ್ಮರ ದಿನಾಚರಣೆ

12:02 PM, Tuesday, October 22nd, 2013
Share
1 Star2 Stars3 Stars4 Stars5 Stars
(4 rating, 6 votes)
Loading...

mandya

ಚನ್ನಪಟ್ಟಣ : ಮಾನವ ಮತ್ತು ಸಮಾಜದ ನಡುವೆ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಿದ್ದು, ಕರ್ತವ್ಯ ನಿರತ ಪೊಲೀಸ್ ಹುತಾತ್ಮರ ಸಂಖ್ಯೆಯೂ ಕೂಡ ಪ್ರತಿವರ್ಷ ದುಪ್ಪಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು. ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

ಚನ್ನಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಸರ್ಕಾರಿ ಅಧಿಕಾರಿಗಳು ಹುದ್ದೆಗೆ ಬಂದಾಗ ಹುದ್ದೆಯ ನೆರಳಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.

ದೇಶ ರಕ್ಷಕರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನಾಗರಿಕ ಆಸ್ತಿ, ಪಾಸ್ತಿ ರಕ್ಷಣೆ, ಅಪರಾಧ ತಡೆ ಮತ್ತು ಹಲವು ಕರ್ತವ್ಯ ಪಾಲನೆಗಳಲ್ಲಿ ಸದಾ ನಿರತರಾಗಿ ಸಮಾಜದ ಸುರಕ್ಷತೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.

ಕರ್ತವ್ಯದಲ್ಲಿ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟುರುತ್ತಾರೆ. ಸಮಾಜದಲ್ಲಿ ಅನೇಕ ಅಪರಾಧ ಚಟುವಟಿಕೆಗಳು, ಸಂಘ ರ್ಷಗಳು ನಡೆಯುತ್ತಿದ್ದು ಕರ್ತವ್ಯ ನಿರತ ಪೊಲೀಸರಿಗೆ ರಕ್ಷಣೆ ಇಲ್ಲ ದಂತಾಗಿದೆ. ಕಾನೂನು ಕಾಯಿದೆಗಳಲ್ಲಿ ಅನೇಕ ಬದಲಾವಣೆಗಳನ್ನು ತರುವಂತಹ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ.

ಸಭೆಯ ಮುನ್ನ ಜಿಲ್ಲಾ ನ್ಯಾಯಾಧೀಶರಾದ ಎಂ.ಕೆ.ಪ್ರಹ್ಲಾದ್, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‍ವಾಲ್, ಸಹಾಯಕ ಪೊಲೀಸ್ ಅಧಿಕಾರಿ ಚನ್ನಪಟ್ಟಣ ಕುಲದೀಪ್ ಜೈನ್, ರಾಮನಗರ ಡಿವೈಎಸ್ಪಿ ರಾಮಲಿಂಗರೆಡ್ಡಿ, ನಾಗರಿಕರ ಪರವಾಗಿ ಪತ್ರಕರ್ತ ಸು.ತ.ರಾಮೇಗೌಡ, ಮಾಧ್ಯಮಗಳ ಪರವಾಗಿ ಪತ್ರಕರ್ತ ಚೆಲುವರಾಜು ಹಾಗೂ ವಿವಿಧ ಗಣ್ಯರುಗಳಿಂದ, ಪೊಲೀಸ್ ಅಧಿಕಾರಿಗಳಿಂದ ಹುತಾತ್ಮ ಪೊಲೀಸರಿಗೆ ಭಾವಪೂರ್ವ ಶ್ರದ್ದಾಂಜಲಿ ಅರ್ಪಿಸಿದರು. ಹುತಾತ್ಮರ ನೆನಪಿಗಾಗಿ ಮೂರು ಸುತ್ತು ಗಾಳಿಯ ಗುಂಡನ್ನು ಹಾರಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English