ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶ

9:33 PM, Friday, November 26th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶಮಂಗಳೂರು :  ಸಾಂವಿಧಾನಿಕ ಚಳುವಳಿ(ಸಾಚ) ಹಾಗೂ ನಮ್ಮ ಟಿ.ವಿ ಜಂಟಿ ಆಶ್ರಯ ದಲ್ಲಿ “ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶ” ದ ಅಂಗವಾಗಿ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಪುರಭವನದ ವರೆಗೆ  ಜಾಥಾ ನಡೆಯಿತು.  ಈ ಜಾಗೃತಿ ಜಾಥವನ್ನು ಗೃಹ ಕೆಲಸ ಸಹಾಯಕರಾದ ಶ್ರೀಮತಿ  ಸುಮತಿ ಕೋಡಿಕಲ್, ಕೃಷಿಕೂಲಿ ಕಾರ್ಮಿಕರಾದ ಶ್ರೀಮತಿ ಕಾರ್ಮಿನ್ ಡಿ’ಸೋಜಾ, ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಶೆಟ್ಟಿ, ಶ್ರೀಮತಿ ಸುಶೀಲ ಪುಜಾರ್ತಿ  ನೀರುಮಾರ್ಗ ಇವರು ಚಾಲನೆ ನೀಡಿದರು.

ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶ” ಸಂವಿಧಾನ ಜಾಗೃತಿ ಸಮಾವೇಶ” ವನ್ನು ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯವಾದಿಗಳು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಆದ ಡಾ| ಸಿ.ಎಸ್.ದ್ವಾರಕನಾಥ್ ಉದ್ಘಾಟಿಸಿದರು.

ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶಬಳಿಕ ಮಾತನಾಡಿದ ಅವರು ಸಂವಿಧಾನವು ದೇಶದ ಎಲ್ಲಾ ಜನರಿಗೆ ಹಲವು ಹಕ್ಕುಗಳನ್ನು ನೀಡಿದ್ದಲದೆ, ಕರ್ತವ್ಯವನ್ನು ಸೂಚಿ ಸಿದೆ. ನಮ್ಮ ಸಂವಿಧಾನವು ಹಲವಾರು ಉತ್ತಮ ಮೌಲ್ಯಗಳನ್ನು ಪ್ರತಿಪಾದಿಸಿದೆ. ಆದರೆ ಜನ ಸಾಮಾನ್ಯರಿಗೆ ಸಂವಿಧಾನದ ಹಕ್ಕು – ಕರ್ತವ್ಯ – ಮೌಲ್ಯಗಳ ಅರಿವಿಲ್ಲ. ಮಾತ್ರವಲ್ಲದೆ, ದೇಶದ ಆಡಳಿತವು ಸಂವಿಧಾನಕ್ಕೆ ಅಪಚಾರವಾಗುವಂತೆ ಕಾರ್ಯವೆಸಗುತ್ತಿದೆ. ಈ ದಿಸೆಯಲ್ಲಿ ಜನ ಸಾಮಾನ್ಯರಿಗೆ ಅರಿವು ಮೂಡಿಸಿ, ಎಚ್ಚೆತ್ತುಕೊಳ್ಳುವಂತೆ ಪ್ರೇರೇಪಿಸುವ ಉದ್ದೇಶಕ್ಕಾಗಿ ಬೇರೆ ಬೇರೆ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಸೇರಿ ’ ಸಂವಿಧಾನಿಕ ಚಳುಚಳಿ’ ಯನ್ನು ಹುಟ್ಟು ಹಾಕಿದರು ಎಂದು ಹೇಳಿದರು.

ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾನವ ಹಕ್ಕುಗಳ ಹೋರಾಟಗಾರ ಎಂ.ವೆಂಕಟಸ್ವಾಮಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ ಚೆಂಗಪ್ಪ ಮೊದಲಾದವರು ಮುಖ್ಯ ಅಥಿತಿಗಳಾಗಿದ್ದರು.

ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶಸಂವಿಧಾನಿಕ ಚಳುವಳಿ ದ.ಕ ಇದರ ಪ್ರಧಾನ ಸಂಚಾಲಕರು ಡಾ|ರೀಟಾ ನೊರೇನ್ಹ ಅವರು ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ಬಿ.ಎ.ಮುಹಮ್ಮದ್ ಹನೀಫ್ ಆಶಯ ಭಾಷಣ ಮಾಡಿದರು. ದ.ಕ ‘ಅಹಿಂದ’ ದ ಕಾರ್ಯಧ್ಯಕ್ಷರಾದ ಲೋಲಾಕ್ಷ ಅವರು “ಪ್ರಜಾಸತ್ತಾತ್ಮಕ ಮೌಲ್ಯಗಳು : ಒಂದು ಸಾಂವಿಧಾನಿಕ ಪರಿಕಲ್ಪನೆ” ಎಂಬ ವಿಷಯ ಮಂಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English