ಸೌಜನ್ಯ ಪ್ರಕರಣವನ್ನು ಸಿಓಡಿ ತನಿಖೆಗೆ ಆಗ್ರಹಿಸಿ ಬಸವೇಶ್ವರ ವೃತ್ತದ ಎನ್ ಎಚ್ 66ರಲ್ಲಿ ಮಾನವ ಸರಪಳಿ ನಿರ್ಮಿಸಿ ಎಬಿವಿಪಿ ಪ್ರತಿಭಟನೆ

1:57 PM, Thursday, October 24th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

protestಮಂಗಳೂರು : ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ತನಿಖೆಗೆ ಆಗ್ರಹಿಸಿ ಬಸವೇಶ್ವರ ವೃತ್ತದ ಎನ್ ಎಚ್ 66ರಲ್ಲಿ ಮಾನವ ಸರಪಳಿ ನಿರ್ಮಿಸಿ ಬುಧವಾರ ಎಬಿವಿಪಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್.ಕೆ, ಉಜಿರೆಯ ಎಸ್.ಡಿ.ಎಂ ಕಾಲೇಜಿನ ದ್ವೀತಿಯ ಪಿ.ಯು.ಸಿ.ಯ ವಿದ್ಯಾರ್ಥಿನಿ ಸೌಜನ್ಯಳನ್ನು ಒಂದು ವರ್ಷದ ಹಿಂದೆ ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿಯ ಕಾಡಿನಲ್ಲಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 2012 ಅಕ್ಟೋಬರ್ 11 ರಂದು ಉಜಿರೆಯಲ್ಲಿ ಸೌಜನ್ಯಾಳ ಕೊಲೆಯನ್ನು ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು  ರ್‍ಯಾಲಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದೆ.

ಅಲ್ಲದೇ 2012 ಅಕ್ಟೋಬರ್ 12 ರಂದು ಮಂಗಳೂರು ವಿ.ವಿ.ಯ ವ್ಯಾಪ್ತಿಯಲ್ಲಿ ಬರುವ ಮಂಗಳೂರು, ಮಂಗಳೂರು ವಿ.ವಿ, ಬೆಳ್ತಂಗಡಿ, ವಿಟ್ಲ, ಪುತ್ತೂರು, ಸುಬ್ರಹ್ಮಣ್ಯ, ಸುಳ್ಯ, ಮೂಡುಬಿದರೆ, ಉಡುಪಿ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕೂಡ ಮನವಿ ಸಲ್ಲಿಸಲಾಗಿದೆ.

ಸೌಜನ್ಯಳ ಮನೆಗೂ ಕೂಡ ಭೇಟಿ ಮಾಡಿ ಸಾಂತ್ವನ ಹೇಳಲಾಗಿದೆ. ನಂತರ ಫೆಬ್ರವರಿ 23ರಂದು ಉಜಿರೆಯಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ವಿಚಾರ ಸಂಕಿರಣವನ್ನು ನಡೆಸಿ ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಲಾಗಿತ್ತು. ಈಗಲೂ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದರ ಮೂಲಕ ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.

ಈ ಪ್ರತಿಭಟನೆಯಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಮಹಿಪಾಲ್ ಬಿ.ಕೆ, ಜಿಲ್ಲಾ ಸಹ ಸಂಚಾಲಕ್ ಯತೀಶ್ ಕುಮಾರ್.ಪಿ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಶುಭ, ನಗರ ಕಾರ್ಯದರ್ಶಿ ಚೇತನ್ ಎಲ್, ಆಗ್ನೇಯ ಚಕ್ರವರ್ತಿ, ವಿಶಾಲ್, ಅಶ್ವಥ್, ಶ್ರವಣ್, ಸಂತೋಷ್, ನಿಖೀಲ್, ಜ್ಯೋತಿ, ನಿವೇದಿತಾ, ಕೃತಿ ಮುಂತಾದವರು ಭಾಗವಹಿಸಿದರು.

protest

protest

protest

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English