ಮಂಗಳೂರು : ನಗರದ ಸಂಘನಿಕೇತನ ಸಭಾಭವನದಲ್ಲಿ ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಖಾತೆಯ ಕೇಂದ್ರ ಸಹ ಸಚಿವರಾದ ಕೋಡಿಕುನ್ನಿಲ್ ಸುರೇಶ್ ಅವರು ಮಂಗಳೂರು ಇಎಸ್ ಐ ಸಿ ಉಪ ಪ್ರಾದೇಶಿಕ ಕಚೇರಿಯ ಉದ್ಘಾಟನೆಯನ್ನು ಗುರುವಾರ ನೆರವೇರಿಸಿದರು .
ಉದ್ಯೋಗ ಖಾತೆಯ ಕೇಂದ್ರ ಸಹ ಸಚಿವರಾದ ಕೋಡಿಕುನ್ನಿಲ್ ಸುರೇಶ್ ಅವರು ಮಾತನಾಡಿ , ನೂರು ಹಾಸಿಗೆ ವ್ಯವಸ್ಥೆಗಳನ್ನು ಹೊಂದಿರುವ ಸುಸಜ್ಜಿತ ಇಎಸ್ ಐ ಆಸ್ಪತ್ರೆ ಮಂಗಳೂರಿನಲ್ಲಿ 1979ರಿಂದಲೇ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಬೇರೆ ಬೇರೆ ಪ್ರದೇಶಗಳಲ್ಲಿರುವ 9 ಇಎಸ್ ಐ ಚಿಕಿತ್ಸಾಲಯಗಳೂ ಇದಕ್ಕೆ ಒಳಪಡುತ್ತವೆ. ರೋಗಿಗಳಿಗೆ ಮತ್ತು ವಿಮೆದಾರರಿಗೆ ಸಹಕಾರಿಯಾಗಲೆಂದು ವಾಹನ ಸೌಕರ್ಯವನ್ನೂ ಹೊಂದಿದೆ. ಬೇರೆ ಬೇರೆ ಪ್ರದೇಶಗಳಲ್ಲಿರುವ ಚಿಕಿತ್ಸಾಲಯಗಳಿಗೆ ಪ್ರಧಾನ ಆಸ್ಪತ್ರೆಗೆ ಈ ವಾಹನ ಸೇವೆ ಇರುತ್ತದೆ. ಜತೆಗೆ ಆರು ಪ್ರತಿಷ್ಠಿತ, ಸುಸಜ್ಜಿತ ಖಾಸಗಿ ಆಸ್ಪತ್ರೆಗಳೊಂದಿಗೆ ಇಎಸ್ ಐ ಕೈಜೋಡಿಸಿದೆ ಎಂದರು.
ನೂತನ ಕಚೇರಿಯು ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂರು ಶಾಖಾ ಕಚೇರಿಗಳಾದ ಬೈಕಂಪಾಡಿ, ಉಡುಪಿ, ಮಂಗಳೂರು ಈ ಉಪ ಪ್ರಾದೇಶಿಕ ಕಚೇರಿಯ ವ್ಯಾಪ್ತಿಗೆಒಳಪಡುತ್ತದೆ. ರೋಗಿಗಳಿಗೆ ಸಹಕಾರಿಯಾಗಲೆಂದು ವಾಹನ ಸೌಕರ್ಯವನ್ನು ಹೊಂದಿದೆ. ಜೊತೆಗೆ ಆರು ಪ್ರತಿಷ್ಟಿತ ಖಾಸಾಗಿ ಆಸ್ಪತ್ರೆಗಳೊಂದಿಗೆ ಇಎಸ್ ಐ ಕೈ ಜೋಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 40 ಶಾಖಾ ಕಚೇರಿಗಳ ಮೂಲಕ ವಿಮೆದಾರರು ಹಣಕಾಸು ವ್ಯವಹಾರ ಮಾಡುತ್ತಾರೆ. ಪ್ರಸಕ್ತ ಸಾಲಿನ ಎಪ್ರಿಲ್ ಮತ್ತು ಮೇನಲ್ಲಿ 10.೦೦ಕೋಟಿ ಹಣವನ್ನು 5೦,೦೦೦ ಮಂದಿಗೆ ನೀಡಲಾಗಿದೆ. 2012-13ರಲ್ಲಿ ಸೂಪರ್ ಸ್ಪೆಶಾಲಿಟಿ ಚಿಕಿತ್ಸೆಗೆಂದು ಒಟ್ಟು 126.45 ಕೋಟಿ ಹಣವನ್ನು ವ್ಯಯಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಸಭಾ ಸದಸ್ಯ ಜೆ.ಆರ್.ಲೋಬೋ, ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್, ಕಾರ್ಪರೇಟರ್ ರಾಜೇಂದ್ರ ಕುಮಾರ್ ರ್ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English