ಮಂಗಳೂರು : ಸವೋಚ್ಚ ನ್ಯಾಯಾಲಯವು 2009 ರಲ್ಲಿ ಜಾರಿಗೊಳಿಸಿರುವ ಆದೇಶದಂತೆ. ದ.ಕ. ಜಿಲ್ಲೆಯಲ್ಲಿರುವ 641 ಕ್ಕೂ ಹೆಚ್ಚು ಹಿಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಅನಧೀಕೃತ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ತೆರವುಗೊಳಿಸಲು ನೋಟೀಸು ಜಾರಿಮಾಡಿದೆ. ಆ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ಶಾಖೆ ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.
ನೂರು ವರ್ಷಗಳಿಗೂ ಇತಿಹಾಸವಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅನಧಿಕೃತ ಎಂದು ಕಂದಾಯ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತ ನೋಟೀಸು ಜಾರಿ ಮಾಡಿರುವುದು ಹಿಂದೂ ಶ್ರದ್ಧಾಳುಗಳಿಗೆ ನೋವುಂಟುಮಾಡಿದೆ. ಸವೋಚ್ಚ ನ್ಯಾಯಾಲಯವು ಜಾರಿಗೊಳಿಸಿರುವ ಆದೇಶವನ್ನು ರಾಜ್ಯ ಸರಕಾರವು 2010 ರ ಫೆಬ್ರವರಿಯಲ್ಲಿ ಜಾರಿಗೊಳಿಸಿದ್ದು ಇದರಿಂದಾಗಿ ಜಿಲ್ಲೆಯಲ್ಲಿರುವ ಅನೇಕ ಧಾರ್ಮಿಕ ಕೇಂದ್ರಗಳು ತೆರವುಗೊಳ್ಳಲಿದೆ. ಎಂದು ಹಿಂದೂ ಜನಜಾಗೃತಿ ವೇದಿಕೆಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದರು.
ಬಹಳ ಹಿಂದಿನಿಂದಲೂ ಇದ್ದ ದೇವಸ್ಥಾನಗಳನ್ನು ಅನಧಿಕೃತ ಎನ್ನುವ ಸುಪ್ರೀಂಕೋರ್ಟ್ ನ ನಿರ್ಧಾರ ಸರಿಯಲ್ಲ. ಎಲ್ಲಿಂದಲೋ ಜಿಲ್ಲೆಗೆ ಬಂದ ಅಧಿಕಾರಿಗಳು ಚರಂಡಿ, ನೆರೆನೀರು, ರಸ್ತೆ ಅಗಲೀಕರಣ ನೆಪವೊಡ್ಡಿ ಧಾರ್ಮಿಕ ಕೇಂದ್ರಗಳನ್ನು ಕೆಡಹುವುದು ಸಮಂಜಸವಲ್ಲ. ಧಾರ್ಮಿಕ ಕೇಂದ್ರಗಳು ನಿರ್ಮಾಣವಾಗುವಾಗ ಇಲ್ಲದ ಅಧಿಕಾರಿಗಳು ಈಗ ಯಾಕೆ ಕ್ರಮ ಕೈಗೊಂಡು ಶ್ರದ್ಧಾಳುಗಳಲ್ಲಿ ನೋವುಂಟುಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಪ್ರಭುತ್ವದಿಂದ ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಆದರೆ ಅದು ಈಗ ಪ್ರಭುತ್ವದೆಡೆಗೆ ಮತ್ತೆ ರಾಜಕಾರಣ ಸಾಗುತ್ತಿದೆ ಎಂದು ಅವರು ಹೇಳಿದರು.
ಸವೋಚ್ಚ ನ್ಯಾಯಾಲಯದ ಸ್ಪೆಷಲ್ ಲೀವ್ಟು ಅಪೀಲು (ಎಸ್.ಎ.ಪಿ) ಕ್ರಮಾಂಕ 8519/2006 ರಲ್ಲಿ ಈ ಅನಧಿಕೃತ ಧಾರ್ಮಿಕ ಕಟ್ಟಡಗಳು ವಿಲೇವಾರಿ ಕುರಿತಂತೆ ಆದೇಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಧಾರ್ಮಿಕ ಮುಂದಾಳು ಲಕ್ಷೀಶ ಕಬಲಡ್ಕ, ರಾಮಸೇವೆಯ ಸದಸ್ಯ ಮಧುಸೂದನ್, ಜಿಲ್ಲಾ ಹೋರಾಟಗಾರರಾದ ರಾಮಭಟ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English