ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ

7:07 PM, Saturday, November 27th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ ಮಂಗಳೂರು: ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಿ ಸಂಘನಿಕೇತನಕ್ಕೆ ಬೇಟಿ ನೀಡಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರು ಆಯೋಜಿಸಿದ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡರು.

ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ಅಲ್ಪ ಸಂಖ್ಯಾತರಿಗೆ ಅನ್ಯಾಯವಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದರು. ರಾಜ್ಯ ಬಿಜೆಪಿ ಸರಕಾರ ಅಲ್ಪ ಸಂಖ್ಯಾತರ ರಕ್ಷಣೆಗೆ ಸಂಪೂರ್ಣ ಬದ್ದವಾಗಿದೆ. ಅಲ್ಪ ಸಂಖ್ಯಾತರಿಗೆ ಬಿಜೆಪಿ ಮೇಲಿರುವ ಅಪನಂಬಿಕೆಯನ್ನು ಅಧಿಕಾರಿಗಳು ಮನವರಿಕೆ ಮಾಡಬೇಕು ಎಂದರು.
ಅಲ್ಪ ಸಂಖ್ಯಾತರು ಮತ್ತು ಬಹು ಸಂಖ್ಯಾತರ ನಡುವೆ ಭಾತೃತ್ವವನ್ನು ಕಾಪಾಡುವ ಕೆಲಸ ಆಯೋಗ ಮಾಡಲಿದೆ. ಬಿಜೆಪಿ ಸರಕಾರ ಪಕ್ಷದಲ್ಲಿ ಕೆಲಸ ಮಾಡಿದವರನ್ನು ಯಾವರೀತಿ ಗೌರವಿಸಿದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.

ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ ಸಭಾಧ್ಯಕ್ಷತೆಯನ್ನು ಬಿಜೆಪಿ ನಗರಾಧ್ಯಕ್ಷ ಶ್ರೀಕರ ಪ್ರಭು ವಹಿಸಿದ್ದರು, ಸಂತೋಷ್ ಕುಮಾರ್ ರೈ ಬೊಳಿಯಾರ್, ಉಸ್ಮಾನ್ ಹಾಜಿ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ, ಕಾಪರ್ೊರೇಟರ್ ಸುಧೀರ್ ಶೆಟ್ಟಿ, ಪಕ್ಷದ ಪದಾಧಿಕಾರಿಗಳಾದ ಅಸ್ಲಾಂ, ರಾಜ್ ಗೋಪಾಲ್ ರೈ, ಸುಮನಾ ಶರಣ್, ಗೀತಾಂಜಲಿ, ಅಜೀಝ್, ಸಿರಾಜ್ ಮುಡಿಪು ಉಪಸ್ಥಿತರಿದ್ದರು.
ಫಜಲ್ ಅಸೈಗೋಳಿ ಸ್ವಾಗತಿಸಿದರು ಮತ್ತು ರಹೀಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.

ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ

ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English