2013ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ : ಹರೇಕಳ ಹಾಜಬ್ಬ

2:28 PM, Thursday, October 31st, 2013
Share
1 Star2 Stars3 Stars4 Stars5 Stars
(4 rating, 6 votes)
Loading...

rajyotsava-prashasti

ಮಂಗಳೂರು: ಹರೇಕಳದಂತಹ ಪುಟ್ಟ ಊರಿನಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣರಾದ ಹರೇಕಳ ಹಾಜಬ್ಬರನ್ನು ರಾಜ್ಯ ಸರ್ಕಾರ ಗುರುತಿಸಿದ್ದು, ಅವರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

2013ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ವಿವಿಧ ಕ್ಷೇತ್ರಗಳ ಒಟ್ಟು 58 ಸಾಧಕರಿಗೆ ಪ್ರಶಸ್ತಿ ಪ್ರಕಟಗೊಂಡಿದೆ. ಸಂಕೀರ್ಣ ವಿಭಾಗದಲ್ಲಿ ಹರೇಕಳ ಹಾಜಬ್ಬ ಆಯ್ಕೆ ಗೊಂಡಿದ್ದಾರೆ. ಇವರು ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದ್ದರು.

ಉಡುಪಿ ಜಿಲ್ಲೆ ಪಡು ಬಿದ್ರೆಯ ಪಿ.ಮಹಮ್ಮದ್ (ವ್ಯಂಗ್ಯಚಿತ್ರಕಾರ) ದ. ಕ. ಜಿಲ್ಲೆಯ ಸದಾಶಿವ ಸಾಲ್ಯಾನ್ (ಕ್ರೀಡೆ), ಸುಂದರನಾಥ್ ಸುವರ್ಣ(ಚಲನಚಿತ್ರ), ಶಶಿಧರ ಅಡಪ(ರಂಗಭೂಮಿ) ಮತ್ತು ಉಡುಪಿಯಿಂದ ಕೆ.ಎಂ.ರಾಘವ ನಂಬಿ ಯಾರ್(ಯಕ್ಷಗಾನ), ಕೆ.ಪಿ.ರಾವ್ (ಉಡುಪಿ) ಹಾಗೂ ಕಾಸರಗೋಡಿನಿಂದ ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ (ಯಕ್ಷ ಗಾನ) ಇವರಿಗೆ ಪ್ರಶಸ್ತಿ ಪ್ರಕಟಗೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English