ಮಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ದೂರದ ಊರಿನಲ್ಲಿದ್ದ ಮಂಗಳೂರಿಗರು ಊರಿಗೆ ಬಂದಿದ್ದರು. ನಿನ್ನೆ ರಜಾ ಅವಧಿ ಮುಕ್ತಾಯಗೊಂಡ ಹಿನ್ನೆ ಲೆಯಲ್ಲಿ ಬೆಂಗಳೂರು ಸೇರಿದಂತೆ ಇತರೆ ಊರಿಗೆ ತೆರಳಲು ಬಿಜೈನ ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಬಸ್ಸುಗಳ ಸಂಖ್ಯೆ ಕಡಿಮೆಯಿದ್ದ ಕಾರಣ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಹೀಗಾಗಿ ಪ್ರಯಾಣಿಕರು ಹೆಚ್ಚುವರಿ ಬಸ್‍ಗಳನ್ನು ಹಾಕುವಂತೆ ಕೆಎಸ್ ಆರ್‍ಟಿಸಿ ಅಧಿಕಾರಿಗಳನ್ನು ಒತ್ತಾಯಿಸಿದಾಗ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹೆಚ್ಚುವರಿ ಹಣ ಕೇಳಿದ ಪ್ರಸಂಗ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ರಾಮ್‍ಸೇನಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ರಾತ್ರಿ ಬಿಜೈನ ಸರ್ಕಾರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದ ಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಅಧಿಕಾರಿಗಳು ಹೆಚ್ಚುವರಿ ಬಸ್ ಹಾಕಲು ಟಿಕೆಟ್‍ಗಿಂತ ಹೆಚ್ಚಿನ ಹಣ ಕೊಡಬೇಕೆಂದು ಸೂಚಿಸಿದ್ದಾರೆ. ಅಧಿಕಾರಿಗಳ ಈ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ವೇಳೆ ಪ್ರಯಾ ಣಿಕರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಕೂಡಲೇ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಪ್ರಯಾಣಿ ಕರು ತಮ್ಮತಮ್ಮ ಊರುಗಳಿಗೆ ಹಿಂತಿರುಗಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರಾಮ್‍ಸೇನಾದ ಮುಖಂಡ ಪ್ರಸಾದ್ ಅತ್ತಾವರ್ ಪ್ರತಿಭಟನೆಯ ವೇಳೆ ಮಾತನಾಡಿ , ಸರ್ಕಾರ ಈ ರೀತಿ ಏಕಾಏಕಿ ದರ ಏರಿಸುವುದು ಸರಿಯಲ್ಲ. ದೀಪಾವಳಿ ಮತ್ತು ಇತರೆ ಹಬ್ಬ ಗಳಂದು ಸರ್ಕಾರ ಹೆಚ್ಚುವರಿ ಬಸ್ ಗಳನ್ನು ರಸ್ತೆಗಿಳಿಸುತ್ತದೆ. ಹಾಗೆಂದು ಅದಕ್ಕೆ ಹೆಚ್ಚುವರಿ ಹಣ ಪಡೆಯುವುದು ಖಂಡನೀಯ. ಹೀಗಾದರೆ ಬಡ ಜನರು ಬದುಕುವುದೇ ದುಸ್ತರವಾಗ ಬಹುದು. ಈ ಬಗ್ಗೆ ನಮಗೆ ಕೆಲ ದಿನಗಳ ಹಿಂದೆಯೇ ದೂರು ಬಂದಿತ್ತು. ಆದರೆ ನಿನ್ನೆ ಇದು ಅತಿಯಾದಾಗ ಪ್ರತಿಭಟನೆ ನಡೆಸಿದ್ದೇವೆ. ಈ ಕೂಡಲೇ ಇಲಾಖೆ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಬೇಕು. ಈ ಹಿಂದಿದ್ದ ದರವನ್ನೇ ನಿಗದಿಪಡಿಸ ಬೇಕು. ಪ್ರಯಾಣಿಕರಿಗೆ ರಾತ್ರಿ ವೇಳೆ ಈ ರೀತಿ ತೊಂದರೆ ಕೊಡುವುದು ಸರಿಯಲ್ಲ. ಇದರಿಂದ ದೂರದ ಊರಿಗೆ ಹೋಗುವವರು ರಾತ್ರಿಯಿಡೀ ಬಸ್ ನಿಲ್ದಾಣದಲ್ಲೇ ಉಳಿಯುವಂತಾಗುತ್ತದೆ ಎಂದ ಅವರು, ಅಧಿಕಾರಿ ಬೇಜವಾಬ್ದಾರಿ ವರ್ತನೆ ಬಿಟ್ಟು ಹೆಚ್ಚು ವರಿ ಬಸ್ ಹಾಕುವಂತೆ ಆಗ್ರಹಿಸಿದರು.
Click this button or press Ctrl+G to toggle between Kannada and English