ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನ ಆರಂಭಗೊಂಡಿದೆ. ಮಂಗಳನ ಅಂಗಳದಲ್ಲಿ ಜೀವ ಕಣ ಪತ್ತೆಗೆ ಇಸ್ರೋ ದೇಶಿ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ(ಪಿಎಸ್ ಎಲ್ ವಿ ಸಿ25)ಯಲ್ಲಿ ಮಂಗಳನೆಡೆಗೆ ಉಪಗ್ರಹ ಹಾರಿಸಲಾಗಿದೆ.
ಸುಮಾರು 40 ನಿಮಿಷಗಳ ಕಾಲದ ಉಸಿರುಬಿಗಿ ಹಿಡಿದ ವಾತಾವರಣದ ನಂತರ 44.4 ಮೀ ಎತ್ತರದ ರಾಕೆಟ್ ನಿಂದ ನೌಕೆ ಪ್ರತ್ಯೇಕಗೊಂಡು ಪಥ ಕಂಡುಕೊಂಡಿದೆ. ಈ ಮೂಲಕ ಮಂಗಳಯಾತ್ರೆ ಕೈಗೊಂಡ ವಿಶ್ವದ 6ನೇ ರಾಷ್ಟ್ರ ಹಾಗೂ ಏಷ್ಯಾದ ಪ್ರಥಮ ದೇಶವಾಗಿ ಭಾರತ ಗುರುತಿಸಿಕೊಂಡಿದೆ.
ರಾಕೆಟ್ ನಿಂದ ಪ್ರತ್ಯೇಕಗೊಂಡು ಉಪಗ್ರಹ ಪಥ ಸೇರಿದೆ ಮಂಗಳಯಾನ ಮೊದಲ ಹಂತ ಯಶಸ್ವಿಯಾಗಿದೆ. 25 ದಿನ ಭೂಮಿ ಸುತ್ತ ಸುತ್ತಲಿರುವ ಉಪಗ್ರಹ, ಡಿ.1ರಂದು ಮಂಗಳನತ್ತ 9 ತಿಂಗಳ ಸುದೀರ್ಘ ಪ್ರಯಾಣ ಆರಂಭಿಸಲಿದೆ. 2014ರ ಸೆ.24ರಂದು ಮಂಗಳನ ಕಕ್ಷೆ ತಲುಪುವ ನಿರೀಕ್ಷೆ ಇದೆ. ಆನಂತರ 160 ದಿನಗಳ ಕಾಲ ಉಪಗ್ರಹ ಮಂಗಳನ ಸುತ್ತ ಸುತ್ತಲಿದೆ. ನನ್ನ ಎಲ್ಲಾ ಸಹದ್ಯೋಗಿ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ISAC ಕೇಂದ್ರದಲ್ಲಿ ಉಪಗ್ರಹ ಹಾಗೂ ಪಿಎಸ್ ಎಲ್ ವಿ ಸಿ25ನ ಅಂತಿಮ ಹಂತದ ಪರೀಕ್ಷೆ ನಡೆಸಲಾಗಿತ್ತು. ಸೆಪ್ಟೆಂಬರ್ 27ರ ವೇಳೆಗೆ ಉಪಗ್ರಹ ಸಮೇತ ನೌಕೆಯನ್ನು ಶ್ರೀಹರಿಕೋಟಾಗೆ ರವಾನಿಸಲಾಗಿತ್ತು. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಂಗಳವಾರ ಮಧ್ಯಾಹ್ನ 2.38ರ ವೇಳೆ ಮಂಗಳಯಾನ ಆರಂಭಗೊಂಡಿದೆ.
Click this button or press Ctrl+G to toggle between Kannada and English