ಆ್ಯಕ್ಟಿವಾ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿಗೆ ಡಿಕ್ಕಿ ಮಹಿಳೆ ಸಾವು

2:59 PM, Wednesday, November 6th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

hoige-bazar

ಮಂಗಳೂರು: ಬಸ್‍ನ ಹಿಂಬದಿಗೆ ಆ್ಯಕ್ಟಿವಾ ಹೊಂಡಾ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರೆ ಮೃತಪಟ್ಟ ಘಟನೆ ನಿನ್ನೆ ಬೆಳಿಗ್ಗೆ ಹೊೈಗೆಬಜಾರ್‍ನಲ್ಲಿ ನಡೆದಿದೆ.

ಮೃತರನ್ನು ಹೊೈಗೆ  ಬಜಾರ್ ನಿವಾಸಿ ವಿಜಯಲಕ್ಷ್ಮಿ(55) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಿಗ್ಗೆ ತನ್ನ ಪತಿಯೊಂದಿಗೆ ಆ್ಯಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆ್ಯಕ್ಟಿವಾ ನಿಯಂತ್ರಣ ತಪ್ಪಿ ಬಸ್ಸೊಂದರ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಆಗ ವಿಜಯಲಕ್ಷ್ಮಿ ಬಸ್ಸಿನ ಹಿಂಬದಿ ಚಕ್ರದ ಅಡಿಗೆ ಬಿದ್ದಿದ್ದು, ಇದರಿಂದಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ವೆನ್‍ಲಾಕ್ ಶವಾಗಾರಕ್ಕೆ ಸಾಗಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English