ಧರ್ಮಸ್ಥಳ ಸುತ್ತಮುತ್ತ ನಡೆದ ಎಲ್ಲಾ ಅಸಹಜ ಸಾವುಗಳನ್ನು ಸಿಬಿಐಗೆ ಒಪ್ಪಿಸಲು ಮನವಿ: ಎಸ್‍ಎಫ್‍ಐ

2:30 PM, Friday, November 8th, 2013
Share
1 Star2 Stars3 Stars4 Stars5 Stars
(4 rating, 4 votes)
Loading...

SFI

ಮಂಗಳೂರು : ಸೌಜನ್ಯ ಅತ್ಯಾಚಾರ ಪ್ರಕರಣವನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐಗೆ ವಹಿಸಲು ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಸಾವು ಗಳನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ನ. 7 ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ  ಪ್ರತಿಭಟನೆ ನಡೆಯಿತು.

ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ)ನ ಕಾರ್ಯದರ್ಶಿ ಜೀವನ್‍ರಾಜ್ ಕುತ್ತಾರ್  ಮಾತನಾಡಿ , ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈವರೆಗೆ ನಡೆದ ಬಹುತೇಕ ಕೊಲೆ ಮತ್ತು ಅತ್ಯಾಚಾರಗಳು ದ್ವೇಷದಿಂದ ನಡೆದದ್ದು. ಇಲ್ಲಿ ಜನರ ಆಸ್ತಿ ಲಪಟಾಯಿಸುವ ಉದ್ದೇಶ ಪ್ರಮುಖವಾಗಿತ್ತು ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟದಲ್ಲಿ ಧರ್ಮಸ್ಥಳ ಸುತ್ತಮುತ್ತ ನಡೆದ ಎಲ್ಲಾ ಅಸಹಜ ಸಾವುಗಳನ್ನು ಸಿಬಿಐಗೆ ಒಪ್ಪಿಸಲು ಮನವಿ ಮಾಡುತ್ತಿದ್ದೇವೆ. ಆದರೆ ಸರ್ಕಾರ ಜನರ ಮತ್ತು ಹೋರಾಟಗಾರರ ಕಣ್ಣಿಗೆ ಮಣ್ಣೆರಚಿ ಕೇವಲ ಸೌಜನ್ಯ ಪ್ರಕರಣವನ್ನು ಮಾತ್ರ ಸಿಬಿಐಗೆ ಒಪ್ಪಿಸಿದೆ. ಆದರೆ ಈ ಪ್ರಕರಣ ಒಪ್ಪಿಸಿದರೆ ನೈಜ ಆರೋಪಿಗಳು ಹೊರ ಬರೋದಿಲ್ಲ. ಅದಕ್ಕೆ ಎಲ್ಲಾ ಪ್ರಕರಣಗಳನ್ನು ಒಪ್ಪಿಸಬೇಕು. ಜನರ ಹೋರಾಟಕ್ಕೆ ಮನ್ನಣೆ ಕೊಡಬೇಕು ಎಂದು ಆಗ್ರಹಿಸಿದರು.

ನಿನ್ನೆ ಸಿದ್ದರಾಮಯ್ಯನವರು, ವೀರೇಂದ್ರ ಹೆಗ್ಗಡೆಯವರ ಪತ್ರಕ್ಕಾಗಿ ಸಿಬಿಐಗೆ ಒಪ್ಪಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ಹಣವುಳ್ಳವರಿಗೆ ಮಾತ್ರ ಇಲ್ಲಿ ಬೆಲೆಯೇ? ನಮ್ಮ ಹೋರಾಟಕ್ಕೆ ಬೆಲೆಯಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ವಿದ್ಯಾರ್ಥಿನಿ ನಾಯಕರಾದ ಮಾಧುರಿ ಬೋಳಾರ್, ಮಯೂರಿ ಮುಂತಾ ದವರು ಹಾಜರಿದ್ದರು.

SFI

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English