ಮಂಗಳೂರು: ಜಪಾನ್‌ನ 11 ಮಂದಿ ಸದಸ್ಯರು ಕರಾವಳಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಯುನಿಟಿ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿದ್ದು ವೈದ್ಯಕೀಯ ಶಿಕ್ಷಣ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಮಂಗಳೂರಿನ ಸಂಸ್ಥೆಗಳೊಂದಿಗೆ ಸೋಮವಾರ ಮಂಗಳೂರಿಗೆ ಭೇಟಿ ನೀಡಿ ಕೈ ಜೋಡಿಸುವ ಆಸಕ್ತಿ ವಹಿಸಿದ್ದಾರೆ.
ಜಪಾನ್‌ನ ವಿವಿಧ ರಾಜಕೀಯ ಪಕ್ಷಗಳ ಯುವ ಸದಸ್ಯರು ಜತೆಯಾಗಿ ರ್‍ಯೋಮಾ ಪ್ರಾಜೆಕ್ಟ್ ಎಂಬ ಸಂಘಟನೆ ರೂಪಿಸಿಕೊಂಡಿದ್ದು ಎಂಟು ದಿನಗಳ ಭಾರತ ಭೇಟಿಗಾಗಿ ಸ್ವಯಂ ಆಸಕ್ತಿಯಿಂದ ಬಂದಿರುವುದಾಗಿ ರ್‍ಯೋಮಾ ಪ್ರಾಜೆಕ್ಟ್‌ನ ಪ್ರತಿನಿಧಿಗಳ ಮುಖ್ಯಸ್ಥ ಸೊಹೈ ಕಮಿಯಾ ಹೇಳಿದರು.
ಅವರು ಸೋಮವಾರ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
68 ವರ್ಷಗಳ ಹಿಂದೆ ಜಪಾನ್ ನಾಶವಾಗುವ ಹಂತಕ್ಕೆ ಬಂದಿತ್ತು. ಆಗ ಅಮರಿಕವೇ ಸೂಪರ್ ಪವರ್ ಆಗಿತ್ತು. ಇತ್ತೀಚಿನ
ವರ್ಷಗಳಲ್ಲಿ ಚೀನಾ ಬಲಿಷ್ಠ ರಾಷ್ಟ್ರವಾಗುತ್ತಿದೆ. ಜಪಾನ್ ಸಾಕಷ್ಟು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಇನ್ನಷ್ಟು ಉತ್ತಮ
ಪ್ರಗತಿ ಸಾಧನೆಗೆ ಭಾರತದ ಜತೆ ಕೈ ಜೋಡಿಸಲು ಉತ್ಸುಕವಾಗಿದೆ. ಆದ್ದರಿಂದ ಭಾರತದ ಭೌಗೋಳಿಕ ಪ್ರದೇಶ, ಜನರ ಬಗ್ಗೆ ಅರಿತುಕೊಳ್ಳುವುದಕ್ಕೆ ರ್‍ಯೋಮಾ ಪ್ರಾಜೆಕ್ಟ್‌ನ ಸದಸ್ಯರು ಬಂದಿರುವುದಾಗಿ ಅವರು ಹೇಳಿದರು.
ಮಂಗಳೂರು ನಗರಕ್ಕೆ ಇನ್ನಷ್ಟು ಬೆಳೆಯುವ ಅವಕಾಶವಿದೆ. ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಇರುವುದನ್ನು ಗುರುತಿಸಿದ್ದೇವೆ. ವೈದ್ಯಕೀಯ ಶಿಕ್ಷಣ ಮತ್ತು ಮೀನುಗಾರಿಕೆಯ ಬಗ್ಗೆ ಇನ್ನಷ್ಟು ಅಧ್ಯಯನ ಮಾಡುವ ಆಸಕ್ತಿ ಇದೆ ಎಂದು ಅವರು ಹೇಳಿದರು.
ನಮ್ಮದು ಜಪಾನ್ ಸರ್ಕಾರ ಪ್ರಾಯೋಜಿತ ಪ್ರವಾಸವಲ್ಲ. ಉತ್ತಮ ಜಪಾನ್ ನಿರ್ಮಿಸುವ ಒಂದೇ ಉದ್ದೇಶವನ್ನು ಹೊಂದಿರುವ ರಾಜಕೀಯ ಪಕ್ಷಗಳ ಸದಸ್ಯರು ಖಾಸಗಿಯಾಗಿ ಈ ಅಧ್ಯಯನ ಪ್ರವಾಸವನ್ನು ಹಮ್ಮಿಕೊಂಡಿದ್ದು, ಮಂಗಳವಾರ ಬೆಂಗಳೂರಿಗೆ ಭೇಟಿ ನೀಡುವ ಉದ್ದೇಶವಿದೆ. ಎಂಟು ದಿನಗಳ ಕಾಲ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಜಪಾನ್‌ಗೆ ತೆರಳಿದ ಬಳಿಕ ತಂಡದ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಪ್ರಸ್ತುತ ಭಾರತದ ಮುಖ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದಷ್ಟೆ ನಮ್ಮ ಉದ್ದೇಶ ಎಂದು ಅವರು ವಿವರಿಸಿದರು.
‘ಮಂಗಳೂರಿನಲ್ಲಿ ಕಾರ್ಮಿಕರ ಕೊರತೆ ಇದ್ದರೆ ಜಪಾನ್‌ನಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ತಂತ್ರಜ್ಞಾನದ ಕೊಡುಕೊಳ್ಳುವಿಕೆಯ ಬಗ್ಗೆ ಚರ್ಚೆಗಳು ನಡೆದಿವೆ’ ಎಂದು ಕೆಸಿಸಿಐ ಅಧ್ಯಕ್ಷ ಮೊಹಮ್ಮದ್ ಅಮೀನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರ್‍ಯೋಮಾ ಪ್ರಾಜೆಕ್ಟ್‌ನ ಸದಸ್ಯರಾದ, ಕನಸಾವಾ ಸಿಟಿ ಕೌನ್ಸಿಲ್ ಸದಸ್ಯ ಕಟ್ಸುಹಿತೋ ತಕೈವಾ, ಹಿರೊಹಿತಟೊ ಫುವಾ, ಕಿಯೋಟೋ ಮೊಟೊಯೊಶಿ, ಮಸಮಿಚಿ ಮತ್ಸುಬಾರಾ, ಕೆನಿಚಿ ಮಿನಅಮಿದೆ, ರ್‍ಯೊ ತಮುರಾ, ಉಯೆರಾ ಚಿಕಾಕೊ, ಸತಅರು ಕೊಮೊರಿ, ಹರುಕಾ ಇಟೊ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English