ಮಂಗಳೂರು: ಮಂಗಳೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತೊಕ್ಕೊಟ್ಟು-ಬಬ್ಬುಕಟ್ಟೆವರೆಗಿನ ರಸ್ತೆಯ ದುರಸ್ತಿಯನ್ನು ಖಂಡಿಸಿ ಬುಧವಾರ ನಗರದ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಜಯರಾಂ ಶೆಟ್ಟಿ ಮಾತನಾಡಿ, ಒಳಚರಂಡಿ ಕಾಮಗಾರಿಗಾಗಿ ತೊಕ್ಕೊಟ್ಟಿನಿಂದ ಬಬ್ಬುಕಟ್ಟೆವರೆಗೆ ಅಗೆಯಲಾಗಿರುವ ರಸ್ತೆ ದುರಸ್ಥಿಪಡಿಸುವಂತೆ ಒತ್ತಾಯಿಸಿ , ರಾಜ್ಯ ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತೊಕ್ಕೊಟ್ಟಿ ನಿಂದ ಬಬ್ಬುಕಟ್ಟೆವರೆಗಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಆರು ತಿಂಗಳ ಹಿಂದೆಯೂ ನಡೆದಂತಹ ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿ ರುವ ಭರವಸೆಗಳು ಇನ್ನೂ ಈಡೇರಿಲ್ಲ. ಎಡಿಬಿಯಿಂದ ಲೋಕೋಪಯೋಗಿ ಇಲಾಖೆಗೆ ಫೆಬ್ರವರಿ ತಿಂಗಳಲ್ಲಿ ಹಣ ಪಾವತಿಯಾಗಿದ್ದರೂ ದುರಸ್ಥಿ ಕಾರ್ಯ ಮಾತ್ರ ನಡೆಯಲೇ ಇಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಲೇ ಇದೆ. ಧೂಳಿನಿಂದ ಅಂಗಡಿ ಮಾಲೀಕರು, ರಿಕ್ಷಾ ಚಾಲಕರು ಪಾದಚಾರಿಗಳು, ಸ್ಥಳೀಯರು ರೋಗಕ್ಕೆ ತುತ್ತಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ಷೇತ್ರದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಆರೋಗ್ಯ ಸಚಿವರು ರಸ್ತೆ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ ಎಂದ ಅವರು ವಾರದೊಳಗೆ ಕಾಮಗಾರಿ ಆರಂಭವಾಗದೇ ಇದ್ದಲ್ಲಿ ಮತ್ತೆ 24 ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದರು.
ಆನಂದ ಶೆಟ್ಟಿ, ಸಚಿನ್ ಶೆಟ್ಟಿ, ಸುರೇಶ್ ಆಲ್ವ, ಜೀವನ್ ಕುಮಾರ್ ಹಾಗೂ ಸಾರ್ವಜನಿಕರು, ರಿಕ್ಷಾ ಚಾಲಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English