ಕಾಂಗ್ರೆಸ್ ಕಚೇರಿಯಲ್ಲಿ ದಿ.ಇಂದಿರಾಗಾಂಧಿಯವರ 96ನೇ ಜನ್ಮದಿನಾಚರಣೆ

3:05 PM, Wednesday, November 20th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

I. Gandhi

ಮಂಗಳೂರು : ಮಾಜಿ ಪ್ರಧಾನಿ ದಿ.ಇಂದಿರಾಗಾಂಧೀಯವರ 96ನೇ ಜನ್ಮದಿನಾಚರಣೆಯ ಅಂಗವಾಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ  ಮಂಗಳವಾರ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು  ಸಲ್ಲಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್  ಮಾತನಾಡಿ, ಮಹಿಳೆಯರಿಗೆ ಇವತ್ತು ಸ್ಥಳೀಯ ಆಡಳಿತದಲ್ಲಿ ಪ್ರಮುಖ ಸ್ಥಾನ ಸಿಗಬೇಕಾದರೆ ಅದಕ್ಕೆ ಮುಖ್ಯ ಕಾರಣ ದಿ.ಇಂದಿರಾಗಾಂಧಿ. ಇವರು ಭೂ ಮಸೂದೆಯನ್ನು ತರುವ ಮೂಲಕ ಸರ್ವರಿಗೂ ಸಮಪಾಲು ದೊರೆಯುವಂತೆ ಮಾಡಿದರು. 20 ಅಂಶಗಳ ಕಾರ್ಯಕ್ರಮ ರೂಪಿಸಿ ಬ್ಯಾಂಕ್‌ನ್ನು ರಾಷ್ಟ್ರೀಕರಣ ಗೊಳಿಸಿದರು. ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಇಂದಿರಾಗಾಂಧಿಯವರಿಂದಲೇ ನಿಜವಾದ ಆರ್ಥಿಕ ಸ್ವಾತಂತ್ರ್ಯ ದೊರೆಯಿತು. ಹಾಗಾಗಿ ಇಂದಿರಾಗಾಂಧಿಯನ್ನು ಮರೆತರೆ ತಾಯಿಯನ್ನು ಮರೆತ್ತಂತೆ ಎಂದು ತಿಳಿಸಿದರು.

2014 ರಲ್ಲಿ ಲೋಕ ಸಭೆ ಚುನಾವಣೆ ಬರಲಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಇತಿಹಾಸ ಗೊತ್ತಿಲ್ಲದಿದ್ದರೂ ದೊಡ್ಡ ದೊಡ್ಡ ಭಾಷಣವನ್ನು ಮಾಡುತ್ತಿದ್ದಾರೆ. ಮೋದಿಯವರು ಪ್ರಧಾನಿ ಎಂದರೆ ಮಕ್ಕಳಾಟ ಎಂದು ಅಂದು ಕೊಂಡಿದ್ದಾರೆ. ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಆಡಳಿತ ದುರುಪಯೋಗ ಮಾಡಿದ್ದರು. ಅಲ್ಪ ಸಂಖ್ಯಾತರನ್ನು, ಮಹಿಳೆಯರನ್ನು, ಗರ್ಭಿಣಿಯರನ್ನು ಅಮಾಯಕರನ್ನು ಕೊಂದಿದ್ದಾರೆ. ಅದೇ ಕಾರಣಕ್ಕಾಗಿ ಅಮೇರಿಕಾ ದೇಶವು ಅವರ ವೀಸಾ ನಿರಾಕರಣೆ ಮಾಡಿತ್ತು. ಇದನ್ನೆಲ್ಲಾ ನಮ್ಮ ಜನತೆ ಅರ್ಥ ಮಾಡಿಕೊಳ್ಳ ಬೇಕಾಗಿದೆ ಎಂದು ತಿಳಿಸಿದರು.

ಸೋನಿಯಾ ಗಾಂಧಿಯವರಿಗೆ ಆಡಳಿತದ ಆಸೆಯಿಲ್ಲ. ಹಾಗಾಗಿ ಅವರು ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿದ್ದರು. ಅಲ್ಪಸಂಖ್ಯಾತರಾದ ಡಾ.ಮನಮೋಹನ್ ಸಿಂಗ್ ಇವರನ್ನು ಪ್ರಧಾನಿ ಮಾಡುವ ಮೂಲಕ ಅವರು ತಮ್ಮ ಅಧಿಕಾರಗಳನ್ನು ತ್ಯಾಗ ಮಾಡಿದರು.ಹಾಗಾಗಿ ಸೋನಿಯಾ ಗಾಂಧಿ ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು.

ಬಳಿಕ ಮಾತನಾಡಿದ ಶಾಸಕ ಮೊಯ್ದಿನ್ ಬಾವಾ ಅವರು, ಇಂದು ವಿಶ್ವದಲ್ಲಿಯೇ ಭಾರತ ತೃತೀಯ ಸ್ಥಾನಕ್ಕೇರಲು ಮುಖ್ಯ ಕಾರಣ ಅಂದು ಇಂದಿರಾ ಗಾಂಧಿಯವರು ಹಾಕಿ ಕೊಟ್ಟಂತಹ ಭೂಮಿಕೆ. ಇಂದಿರಾಗಾಂಧಿಯವರ ಅನೇಕ ಕಾರ್ಯಕ್ರಮಗಳಿಂದ ಬಡತನದಲ್ಲಿದ್ದ ಭಾರತ ಇದೀಗ ಇಡೀ ಪ್ರಪಂಚದಲ್ಲಿ ಪ್ರಶಂಸೆಯನ್ನು ಗಳಿಸಿದೆ. ಬ್ಯಾಂಕ್ ನ್ನು ರಾಷ್ಟ್ರೀಕರಣ ಗೊಳಿಸಿ ಸಮಾಜದಲ್ಲಿನ ಸಿರಿವಂತರ ಹಾಗೂ ಬಡವರ್ಗದ ಜನರ ನಡುವಿನ ಅಸಮತೋಲನವನ್ನು ನಿರ್ಮೂಲನೆ ಗೊಳಿಸಿದರು. ಇಂದಿರಾಗಾಂಧಿಯವರು ನಮಗೆಲ್ಲರಿಗೂ ಶಕ್ತಿಯಾಗಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಐವನ್.ಡಿ.ಸೋಜಾ, ವಿಜಯ್ ಕುಮಾರ್ ಶೆಟ್ಟಿ, ಶಶಿಧರ್ ಹೆಗ್ಡೆ, ಹಿಲ್ಡಾ ಆಳ್ವ, ಮಮತ ಗಟ್ಟಿ ಮತ್ತು  ಕೃಪಾ ಆಳ್ವ ಹಾಗೂ ಮತ್ತಿತರು ಉಪಸ್ಥಿತರಿದ್ದರು.

I. Gandhi

I. Gandhi

I. Gandhi

I. Gandhi

I. Gandhi

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English