ಸುಳ್ಯ ಕಾಲ್ನಡಿಗೆಯ ಪ್ರತಿಭಟನ ತಂಡ ಇಂದು ಮಂಗಳೂರಿಗೆ : ಸೌಜನ್ಯಾ ಕೊಲೆಯ ನೆನೆಪು

2:39 PM, Friday, November 22nd, 2013
Share
1 Star2 Stars3 Stars4 Stars5 Stars
(4 rating, 6 votes)
Loading...

sullia

ಸುಳ್ಯ : ಸೌಜನ್ಯಾ ಕೊಲೆಯ ನಂತರ ಎಚ್ಚೆತ್ತ ಗುಲ್ಬರ್ಗ ಧರ್ಮಪೀಠದ ಸ್ವಾಮಿ ಕಬೀರಾನಂದ ಹಾಗೂ ಜನಜಾಗ್ರತಿ ಹೊರಟಗಳಲ್ಲಿ ಪಳಗಿದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ದ ಸ್ಥಳೀಯ ಕಾರ್ಯದರ್ಶಿ ಕೆ.ವಸಂತ್ ಆಚಾರಿ ಇವರ ಜಂಟಿ ನೇತ್ರತ್ವದಲ್ಲಿ ಕಾರ್ಯಕರ್ತರ ಒಂದು ತಂಡವು ಸುಳ್ಯದಿಂದ ಮಂಗಳೂರು ವರೆಗೆ ಗುರುವಾರ (ನ.21) ಪಾದಯಾತ್ರೆ ಬೆಳೆಸಿದೆ.

ಈ ಜಾಥ ಶುಕ್ರವಾರ ಸಂಜೆಯ ಹೊತ್ತಿಗೆ ಮಂಗಳೂರು ತಲುಪಿ ಒಂದು ಪ್ರತಿಭಟನೆಯ ಸಭೆಯನ್ನು ನಡೆಸುವ ಸಾಧ್ಯತೆ ಇದೆ.

ಕಾಲ್ನಡಿಗೆಯ ಪ್ರಾರಂಭದಲ್ಲಿ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಕಬೀರಾನಂದರು, ಸೌಜನ್ಯಾ ಕೊಲೆಯ ಹಿಂದೆ 3 ದಶಕಗಳ ಮಹಿಳಾ  ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿದ್ದು, ಈ 472  ಕೊಲೆ ಪ್ರಸಂಗಗಳ ಆಮೂಲಾಗ್ರ ತನಿಖೆ ಈಗಾಲೇ ಆಗಬೇಕೆಂದರು. ವಸಂತ ಆಚಾರಿ ಮಾತನಾಡುತ್ತ ತನ್ನ ಮಾರ್ಕ್ಸ್‌ಸಿಸ್ಟ್ ಪಕ್ಷವು ಬಹುಕಾಲದಿಂದ ಜನತಾ ದ್ರೋಹಿಗಳ ವಿರೋಧ ಹೋರಾಡುತ್ತ ಬಂದಿದ್ದು  ಈಗ ಪುಣ್ಯ ಸ್ಥಳ ಧರ್ಮಸ್ಥಳದಲ್ಲಿ ಆಗಿ ಹೋಗಿರುವ ನಾನಾ ಮಹಿಳಾ ಲಂಪಟ ತನ-ದುರಚಾರ-ಕೊಲೆ ಇತ್ಯಾದಿ ಪ್ರಕರಣಗಳಲ್ಲಿ  ಬಂದಿಸಬೇಕಾದ  ಪಾಪತ್ಮರ ವಿರುದ್ದ ಈಗ ತನ್ನ ಆಯುಧಗಳನ್ನು ಎತ್ತಿ ಹೋರಾಡಲು ಸಜ್ಜಾಗಿದೆ ಎಂದರು.

ಬಳಿಕ ಅಲ್ಲಿ ಹಾಜರಿದ್ದ  ಕೆಆರ್  ಶ್ರಿಯಾನ್, ಸುನೀಲ್ ಕುಮಾರ್ , ದಯಾನಂದ ಶೆಟ್ಟಿ ಮತ್ತಿತರು ಸುಳ್ಯದಿಂದ ಮಂಗಳೂರಿಗೆ ಹೋಗಲು  ಬಿಳ್ಕೊಡಲಾಯಿತು.

ಈ ಜಾಥ ತಂಡವನ್ನು ಸ್ವಾಗತಿಸಲು ದಾರಿಯುದ್ದಕ್ಕೂ ಅಲ್ಲಲ್ಲಿ ಆ ಜಾಗದ ಜನರು ನೇರದಿದ್ದರು. ಈಗೇ, ಕೇಂದ್ರ ತನಿಖೆಗಾಗಿ ಹಿಂದಿನ 472 ಪ್ರಸಂಗಗಳನ್ನು ಒಳಪಡಿಸುವ ಒತ್ತಾಯ ದ.ಕ ಜಿಲ್ಲಾ ಜನರಲ್ಲಿ ಈಚೇಗೆ ಕಂಡು ಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English