ಮಂಗಳೂರು: ಮಹಾನಗರ ಪಾಲಿಕೆಯ ಮಣ್ಣಗುಡ್ಡದಲ್ಲಿರುವ ಏಕೈಕ ಸಾರ್ವಜನಿಕ ಈಜುಕೊಳದ ಒಟ್ಟು ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ಶಾಸಕ ಜೆ.ಆರ್. ಲೋಬೋ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು.
ಈಜುಕೊಳದಲ್ಲಿ ಈಜುಗಾರರಿಗೆ ಸೂಕ್ತ ಭದ್ರತೆ ನೀಡಲು ವಿಶೇಷ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಈಜುಕೊಳಕ್ಕೆ ಸಿಸಿ ಕೆಮರಾ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಜತೆಗೆ ಸೂಕ್ತ ಭದ್ರತೆಗಾಗಿ ಸೆಕ್ಯುರಿಟಿ ಗಾರ್ಡ್, ಲೈಫ್ ಗಾರ್ಡ್ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚಿಸಿದರು. ಸಮರ್ಪಕವಾಗಿ ಈಜುಕೊಳದ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಅಧಿಕಾರಿಗಳಾದ ಕಾಂತರಾಜು, ಯಶವಂತ ಕಾಮತ್, ಕೃಷ್ಣಾನಂದ, ಈಜುಕೊಳದ ಮ್ಯಾನೇಜರ್ ರಮೇಶ್ ಬಿಜೈ ಮೊದಲಾದವರು ಭಾಗವಹಿಸಿದ್ದರು.
Click this button or press Ctrl+G to toggle between Kannada and English