ಮಂಗಳೂರು : ನಗರದ ಬಲ್ಲಾಳ್ಬಾಗ್ನ ಕಾಯರ್ಮಂಜ್ ಕಟ್ಟಡದಲ್ಲಿ ಪಿ.ಸಿ. ಜ್ಯುವೆಲ್ಲರಿ ಶೋರೂಂ ಅನ್ನು ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಭಾನುವಾರ ಉದ್ಘಾಟನೆ ಮಾಡಿದರು.
ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಮಾತನಾಡಿ, ಮಂಗಳೂರು ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು, ಇಲ್ಲಿಯವರಿಗೆ ಆಭರಣ ತುಂಬಾ ಇಷ್ಟ, ಅಷ್ಟು ಗ್ಯಾರಂಟಿ ನೀಡುತ್ತೇನೆ. ಮಂಗಳೂರಿಗೆ ಬರಬೇಕೆಂದು ಹಂಬಲಿಸುತ್ತಿರುತ್ತೇನೆ, ಸಮಯಾವಕಾಶ ಕೊರತೆಯಿಂದ ಬರಲು ಸಾಧ್ಯವಾಗಿಲ್ಲ. ಪಿ.ಸಿ. ಜ್ಯುವೆಲ್ಲರಿ ಉದ್ಘಾಟನೆಗೆ ಕರೆದಾಗ ತಕ್ಷಣ ಒಪ್ಪಿಕೊಂಡು ಬಂದೆ. ಇಲ್ಲಿನ ಮಲ್ಲಿಗೆ ಹೂವು ಎಂದರೆ ನನಗೆ ತುಂಬಾ ಇಷ್ಟ. ವಿಮಾನ ನಿಲ್ದಾಣದಿಂದಲೇ ಹೂ ಖರೀದಿಗೆ ಹಠ ಹಿಡಿದಿದ್ದೆ. ಹೂ ಪಡೆದು ಮುಡಿದೆ, ತುಂಬಾ ಖುಷಿ ಆಯಿತು ಎಂದರು.
ಊರಿಗೆ ಬರಲು ಆಗುತ್ತಿಲ್ಲ ಎಂದು ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಕೆಲಸ ಮಾಡಲು, ರಜೆ ತಿರುಗಾಟಕ್ಕೆ ಹೋಗಲು ಮನಸ್ಸಾಗುತ್ತದೆ. ಆದರೆ ಮಗು ಜತೆ ಇರುವುದು ಅಗತ್ಯ. ಊರಿಗೆ ಬಂದಾಗ ಕಟೀಲ್ ಉಳ್ಳಾಲ್ದಿಯನ್ನು ನೋಡಬೇಕು ಎನಿಸುತ್ತದೆ. ಮಂಗಳೂರಿಗೆ ಬರುವಾಗ ಬಹಳ ಪ್ರೀತಿ ತೋರಿಸಿದಿರಿ, ತುಂಬಾ ಥ್ಯಾಂಕ್ಸ್ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
Click this button or press Ctrl+G to toggle between Kannada and English