ಯುಎಂಪಿಪಿ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನಾ ಜಾಥಾ

2:36 PM, Tuesday, November 26th, 2013
Share
1 Star2 Stars3 Stars4 Stars5 Stars
(No Ratings Yet)
Loading...

massive-project

ಮೂಡುಬಿದಿರೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಾತೃಭೂಮಿ ಸಂರಕ್ಷಣಾ ಸಮಿತಿ ನಿಡ್ಡೋಡಿ ಸಂಯುಕ್ತಾಶ್ರಯದಲ್ಲಿ ಕೃಷಿ ಆಧರಿತ ಪ್ರದೇಶವಾದ ನಿಡ್ಡೋಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ವಿರೋಧಿಸಿ ನಿಡ್ಡೋಡಿ ಪೇಟೆಯಲ್ಲಿ  ನ.24ರಂದು ಪ್ರತಿಭಟನಾ ಜಾಥಾ ನಡೆಯಿತು.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್, ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಪರಿಸರಕ್ಕೆ ಮಾರಕವಾದ ಉಷ್ಣ ವಿದ್ಯುತ್ ಸ್ಥಾವರವನ್ನು ಯಾವುದೇ ಕಾರಣಕ್ಕೂ ನಿಡ್ಡೋಡಿಯಲ್ಲಿ ಸ್ಥಾಪಿಸಬಾರದು . ಅಧಿಕ ಸಾಮರ್ಥ್ಯದ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾದಲ್ಲಿ ಕೇವಲ ನಿಡ್ಡೋಡಿ ಮಾತ್ರವಲ್ಲದೇ ದ.ಕ. ಮತ್ತು ಉಡುಪಿ ಜಿಲ್ಲೆಗೆ ಬಾಧೆ ಯುಂಟಾಗಲಿದೆ. ಪಶ್ಚಿಮಘಟ್ಟಗಳ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ದುಗ್ಗೇಗೌಡ, ಕೃಷಿ ಮತ್ತು ಕೃಷಿಗೆ ಬಾಧಕವಾಗಲಿರುವ ಯೋಜನೆ ಸ್ಥಾಪನೆ ಕೂಡದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಅಲ್ಫೋನ್ಸ್ ಡಿಸೋಜಾ, ಯುಎಂಪಿಪಿ ಸ್ಥಾವರ ಸ್ಥಾಪನೆಯನ್ನು ವಿರೋಧಿಸುತ್ತಿರುವ ತಮ್ಮ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈಗಾಗಲೇ ಅನೇಕ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಯಾದಿಯಾಗಿ ಅನೇಕ ರಿಗೆ ಮನವಿ ಸಲ್ಲಿಸಿದರೂ ಇದುವರೆಗೆ ನಮಗೆ ಸರಕಾರದಿಂದ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಲಭಿಸದಿರುವುದು ಖೇದಕರ. ಸಂತ್ರಸ್ತ ರನ್ನು ಕತ್ತಲಲ್ಲಿಟ್ಟು ಸ್ಥಾವರ ಸ್ಥಾಪನೆಗೆ ತೆರೆಮರೆಯಲ್ಲಿ ಕಾರ್ಯೋನ್ಮುಖ ರಾಗಿದ್ದಾರೆಯೇ ಎಂಬ ಸಂದೇಹ ಕಾಡು ತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 3 ಬಾರಿ ಜಿಲ್ಲೆಗೆ ಆಗಮಿಸಿದ್ದರೂ ನಿಡ್ಡೋಡಿ ಸ್ಥಾವರ ಬಗ್ಗೆ ಮಾತನಾಡದಿರುವುದು ಹಾಗೂ ಜನ ಪ್ರತಿನಿಧಿಗಳೂ ಈ ಬಗ್ಗೆ ಉಲ್ಲೇಖಿಸದಿರುವುದು ತೀವ್ರ ಬೇಸರ ತಂದಿದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಕಾರ್ಕಳ ಯೋಜ ನಾಧಿಕಾರಿ ಎಚ್.ಎಲ್. ಮುರಳೀಧರ, ಪುತ್ತಿಗೆ ವಲಯ ಮೇಲ್ವಿಚಾರಕ ಗೋಪಾಲ ಜಿ., ಪುತ್ತಿಗೆ ವಲಯ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಕರುಣಾಕರ ಶೆಟ್ಟಿ, ಯೋಜನೆಯ ಬಂಗೇರಪದವು ಒಕ್ಕೂಟ ಅಧ್ಯಕ್ಷ ಗಣೇಶ,ಮಾತೃ ಭೂಮಿ ಸಂರಕ್ಷಣಾ ಸಮಿತಿಯ ಗೌರವಾ ಧ್ಯಕ್ಷ ಜಗನ್ನಾಥ ಶೆಟ್ಟಿ ಚಾವಡಿಮನೆ, ಸಂಚಾಲಕ ಕಿರಣ್ ಮಂಜನಬೈಲು, ಕಾರ್ಯದರ್ಶಿ ವಿನೋದರ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English