ಮಂಗಳೂರು : ಶ್ರೀರಾಮ ಸೇನೆಯ ವತಿಯಿಂದ ನಗರದ ಆರ್ಯಸಮಾಜದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು. ನೂತನ ಸಂಘಟನೆ `ರಾಮ್‍ಸೇನಾ’ವನ್ನು ಸ್ಥಾಪಿಸುವ ಮೂಲಕ ಶ್ರೀರಾಮ ಸೇನೆಯನ್ನು ತ್ಯಜಿಸಿದ್ದೇನೆಂದು ಸ್ವತಃ ಪ್ರಸಾದ್ ಅತ್ತಾವರ್ ಹೇಳುತ್ತಿದ್ದರೂ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತ್ರ ಅವರು ನಮ್ಮಲ್ಲೇ ಇದ್ದಾರೆ ಎನ್ನುವ ಹೇಳಿಕೆ ನೀಡಿರುವುದು ಕಾರ್ಯಕರ್ತ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಾದ್ ಅತ್ತಾವರ್ ಶ್ರೀರಾಮ ಸೇನೆ ತ್ಯಜಿಸಿಲ್ಲ. ಅವರು ನಮ್ಮಲ್ಲೇ ಇದ್ದಾರೆ. ಅಲ್ಲದೇ ಇಂದಿಗೂ ಅವರು ಶ್ರೀರಾಮ ಸೇನೆಯ ಸಮನ್ವಯ ಸಮಿತಿ ಸದಸ್ಯ. ಇವಿಷ್ಟೇ ಅಲ್ಲದೇ ಶ್ರೀರಾಮ ಸೇನೆ ಮತ್ತು ರಾಮ್ ಸೇನಾ ಎಂಬ ಎರಡೂ ಸಂಘಟ ನೆಗಳು ಒಂದೇ ಆಗಿದೆ ಎನ್ನುವ ಮೂಲಕ ಗೊಂದಲದ ಹೇಳಿಕೆ ನೀಡಿ ದ್ದಾರೆ. ಆದರೆ ಇವರ ಈ ಹೇಳಿಕೆ ಶ್ರೀರಾಮ ಸೇನೆಯ ಕಾರ್ಯಕರ್ತ ವಲಯದಲ್ಲೇ ಸಾಕಷ್ಟು ಸಮಾಧಾನಕ್ಕೆ ಕಾರಣವಾಗಿದೆ.
ಪ್ರಸಾದ್ ಅತ್ತಾವರ್ `ರಾಮ್ ಸೇನಾ’ ಕಟ್ಟಿಕೊಂಡು ತನ್ನದೇ ಆದ ಅಧಿಕೃತ ಕಾರ್ಯಕ್ರಮದಲ್ಲಿ ತೊಡಗಿದ್ದರೂ ಮುತಾಲಿಕ್ ಮಾತ್ರ ಅವರು ಇನ್ನೂ ನಮ್ಮಲ್ಲೇ ಇದ್ದಾರೆ ಎಂದು ಹೇಳಿಕೆ ನೀಡಿರುವುದರ ಹಿಂದೆ ಯಾವ ಉದ್ದೇಶ ಅಡಗಿದೆ ಎಂಬ ಪ್ರಶ್ನೆಯೆದ್ದಿದೆ. ಇದೇ ವೇಳೆ ಸರ್ಕಾರಕ್ಕೆ ಮೂರು ಮನವಿ ಸಲ್ಲಿಸಿದ ಅವರು, ಹಜ್ ಯಾತ್ರಾರ್ಥಿಗಳಿಗೆ ನೀಡುವಂತೆ ಅಯ್ಯಪ್ಪ ವೃತಧಾರಿ ಗಳಿಗೂ ಸರ್ಕಾರ ತಲಾ 5ಸಾವಿರ ಧನ ಸಹಾಯ ನೀಡ ಬೇಕು. 2006ರಿಂದ ಒಬ್ಬನೇ ಒಬ್ಬ ಖೈದಿ ಯನ್ನು ಸನ್ನಡತೆಯ ಮೇಲೆ ಬಿಡು ಗಡೆ ಮಾಡಿಲ್ಲ. ಹಾಗಾಗಿ ಈ ಕಾರ್ಯಕ್ಕೆ ಮತ್ತೆ ಚಾಲನೆ ನೀಡಬೇಕು. ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿ ವಾಣ ಹಾಕಬೇ ಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿ ಕೊಂಡರು.
ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೆಮಾರ್, ಜೀವನ್ ನೀರ್‍ಮಾರ್ಗ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English